Loading video

ಗಾಯಗೊಂಡ ಕಾಗೆಯನ್ನು ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡುತ್ತಿರುವ ಕೊಪ್ಳಳ ಶ್ರೀನಿವಾಸ ರೆಡ್ಡಿಯ ಮಾನವೀಯತೆ ಅನನ್ಯ

Updated on: Nov 29, 2023 | 1:41 PM

ಕಾಗೆಯ ಕಾಲುಗಳಿಗೆ ಪೆಟ್ಟಾಗಿದ್ದು ಸಂಪೂರ್ಣವಾಗಿ ಗುಣ ಹೊಂದಿದ ಬಳಿಕ ರೆಡ್ಡಿ ಹಾರಿಬಿಡಲಿದ್ದಾರಂತೆ. ಕಾಗೆಗೆ ಸಮಯಕ್ಕೆ ಸರಿಯಾಗಿ ಊಟ-ನೀರು ನೀಡಿ ಆರೈಕೆ ಮಾಡುತ್ತಿರುವ ಅವರು ನಮ್ಮೆಲ್ಲರಿಗೆ ಮಾದರಿಯಾಗಿ ಗೋಚರಿಸುತ್ತಾರೆ. ಅವರ ಪಕ್ಷಿಪ್ರೇಮ, ಮಾನವೀಯತೆ ಮತ್ತು ದಯಾಳುತನಕ್ಕೆ ಎಣೆಯಿಲ್ಲ.

ಕೊಪ್ಪಳ: ಈ ವ್ಯಕ್ತಿಯನ್ನು ನೋಡಿ, ಇವರ ಹೆಸರು ಶ್ರೀನಿವಾಸ ರೆಡ್ಡಿ (Srinivas Reddy), ಜಿಲ್ಲೆಯ ಕಾರಟಗಿ (Karatagi) ತಾಲ್ಲೂಕಿನ ಮರ್ಲಾನ್ ಹಳ್ಳಿಯ ಹೊರವಲಯಲ್ಲಿ ರಾಜ್ಯ ಹೆದ್ದಾರಿ ಪಕ್ಕ ಒಂದು ಅಂಗಡಿ ಇಟ್ಟುಕೊಡು ಬದುಕು ನಡೆಸುತ್ತಿದ್ದಾರೆ. ಇವರು ಆರೈಕೆ ಮಾಡಿ ಒಂದು ಚಿಕ್ಕಮಗುವಿನಂತೆ ಪೋಷಿಸುತ್ತಿರೋದು ಒಂದು ಕಾಗೆಯನ್ನು (crow)! ಕಾಗೆಯನ್ನು ನಾವೆಲ್ಲ ಅಪಶಕುನ ಎಂದು ಭಾವಿಸುತ್ತೇವೆ. ಆದರೆ, ರೆಡ್ಡಿಯವರ ಮಾನವೀಯತೆ, ಅಂತಕರಣಗಳು ನಮ್ಮ ಪುರಾತನ ಭಾವನೆಗಿಂತ ಉನ್ನತವಾದವು. ತಮ್ಮ ಅಂಗಡಿಯ ಮುಂದೆ ಬೈಕೊಂದಕ್ಕೆ ಅಪ್ಪಳಿಸಿ ಗಾಯಗೊಂಡು ಬಿದ್ದಿದ್ದ ಈ ಕಾಗೆಯನ್ನು ಅವರು ಕೂಡಲೇ ಪಶುವೈದ್ಯಶಾಲೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಯಲ್ಲಿಟ್ಟುಕೊಂಡು ಸಾಕುತ್ತಿದ್ದಾರೆ. ಅದರ ಕಾಲುಗಳಿಗೆ ಪೆಟ್ಟಾಗಿದ್ದು ಸಂಪೂರ್ಣವಾಗಿ ಗುಣ ಹೊಂದಿದ ಬಳಿಕ ಹಾರಿಬಿಡಲಿದ್ದಾರಂತೆ. ಕಾಗೆಗೆ ಸಮಯಕ್ಕೆ ಸರಿಯಾಗಿ ಊಟ-ನೀರು ನೀಡಿ ಆರೈಕೆ ಮಾಡುತ್ತಿರುವ ರೆಡ್ಡಿ ನಮ್ಮೆಲ್ಲರಿಗೆ ಮಾದರಿಯಾಗಿ ಗೋಚರಿಸುತ್ತಾರೆ. ಅವರ ಪಕ್ಷಿಪ್ರೇಮ, ಮಾನವೀಯತೆ ಮತ್ತು ದಯಾಳುತನಕ್ಕೆ ನಮ್ಮದೊಂದು ಸಲಾಂ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ