ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!

Updated on: May 17, 2026 | 2:50 PM

ಬೆಂಗಳೂರಿನ ಕೊತ್ತನೂರಿನಲ್ಲಿರುವ ನಿರಾಶ್ರಿತರ ಕೇಂದ್ರವೊಂದರಿಂದ ನಾಲ್ವರು ವಿದೇಶಿ ಅಕ್ರಮ ವಲಸಿಗ ಮಹಿಳೆಯರು ಪರಾರಿಯಾಗಿದ್ದಾರೆ. ಮೇ 11ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೈಜೀರಿಯಾ ಮತ್ತು ಉಗಾಂಡ ಮೂಲದ ಈ ಮಹಿಳೆಯರು ಕಟ್ಟಡದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ತಪ್ಪಿಸಿಕೊಂಡಿದ್ದಾರೆ.

ಬೆಂಗಳೂರು, ಮೇ 17: ಬೆಂಗಳೂರಿನ ಕೊತ್ತನೂರಿನಲ್ಲಿರುವ ನಿರಾಶ್ರಿತರ ಕೇಂದ್ರವೊಂದರಿಂದ ನಾಲ್ವರು ವಿದೇಶಿ ಅಕ್ರಮ ವಲಸಿಗ ಮಹಿಳೆಯರು ಪರಾರಿಯಾಗಿದ್ದಾರೆ. ಮೇ 11ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೈಜೀರಿಯಾ ಮತ್ತು ಉಗಾಂಡ ಮೂಲದ ಈ ಮಹಿಳೆಯರು ಕಟ್ಟಡದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ತಪ್ಪಿಸಿಕೊಂಡಿದ್ದಾರೆ.

ತೋಪಿಷ್ಟ ನಗವ, ಸಫೀನ ಮತ್ತು ಪಿತಿನಾ ಎಂಬ ಮೂವರು ಸೇರಿದಂತೆ ಈ ನಾಲ್ವರು ಮಹಿಳೆಯರು ‘ಹೋಂ ಫಾರ್ ಹೋಪ್’ ನಿರಾಶ್ರಿತರ ಕೇಂದ್ರದಲ್ಲಿದ್ದರು. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಇವರು ಮಾದಕವಸ್ತು ಮಾರಾಟ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈಗಾಗಲೇ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಿಗಿ ಭದ್ರತೆಯ ನಡುವೆಯೂ ಇವರು ಪರಾರಿಯಾಗಿದ್ದು, ಬೆಂಗಳೂರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us