ಕಾರವಾರ: ಕಾರಿನ ಬಾನೆಟ್ ಹೊಕ್ಕಿದ್ದ ಭಾರಿಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ
ಬಹಳ ಜಾಗರೂಕತೆಯಿಂದ ಅವರು ಹಾವನ್ನು ಬಾನೆಟ್ ನಿಂದ ಹೊರಗೆಳೆದು ಒಂದು ಚೀಲದಲ್ಲಿ ಹಾಕಿಕೊಂಡು ಕಾಡಿನೊಳಗೆ ಒಯ್ದುಬಿಟ್ಟಿದ್ದಾರೆ.
ಕಾರವಾರ: ಕಾಳಿಂಗ ಸರ್ಪ (black cobra) ಬಹಳ ಅಪಾಯಕಾರಿ ಹಾವು ಅಂತ ಹೇಳುತ್ತಾರೆ. ಕಾರವಾರ ತಾಲ್ಲೂಕಿನ ಮಲ್ಲಾಪೂರ ಹೆಸರಿನ ಗ್ರಾಮದಲ್ಲಿ 10 ಅಡಿಗಳಿಗಿಂತ ಜಾಸ್ತಿ ಉದ್ದದ ಕಾಳಿಂಗ ಸರ್ಪವೊಂದು ಅಲ್ಲಿನ ನಿವಾಸಿ ಜೈಸಿಂಗ್ (Jaisingh) ಎನ್ನುವವರು ತಮ್ಮ ಮನೆಮುಂದೆ ನಿಲ್ಲಿಸಿದ್ದ ಕಾರಿನ ಬಾನೆಟ್ (bonnet) ಹೊಕ್ಕಿದೆ. ಅವರು ಕೂಡಲೇ ಅರಣ್ಯ ಇಲಾಖೆಯ ಸಿಬ್ದಂದಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಅಗಮಿಸಿದ ಸಿಬ್ಬಂದಿಯಲ್ಲಿ ಒಬ್ಬರು ಉರಗ ತಜ್ಞರಿದ್ದರು. ಬಹಳ ಜಾಗರೂಕತೆಯಿಂದ ಅವರು ಹಾವನ್ನು ಬಾನೆಟ್ ನಿಂದ ಹೊರಗೆಳೆದು ಒಂದು ಚೀಲದಲ್ಲಿ ಹಾಕಿಕೊಂಡು ಕಾಡಿನೊಳಗೆ ಒಯ್ದುಬಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos