ರಾಮನಗರ: ಚೆನ್ನಪಟ್ಟಣ ಬಳಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಮಲಗಿದ್ದ ನಾಯಿಯೊಂದು ಚಿರತೆಗೆ ಆಹುತಿ!

ರಾಮನಗರ: ಚೆನ್ನಪಟ್ಟಣ ಬಳಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಮಲಗಿದ್ದ ನಾಯಿಯೊಂದು ಚಿರತೆಗೆ ಆಹುತಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 21, 2022 | 3:30 PM

ಫ್ಯಾಕ್ಟರಿ ಆವರಣದಲ್ಲಿ ನಾಯಿ ಇದ್ದುದನ್ನು ಗಮನಿಸಿದ ಚಿರತೆಯೊಂದು ಅದನ್ನು ಅನಾಮತ್ತಾಗಿ ಎತ್ತಿಕೊಂಡು ಕಾಡಿನೊಳಗೆ ಓಡಿಹೋಗುವ ದೃಶ್ಯ ಅಲ್ಲಿ ಅಳವಡಿಸಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.

ರಾಮನಗರ: ಜಿಲ್ಲೆಯ ಹಲವಾರು ಭಾಗಗಳಲ್ಲಿ ಹೆಚ್ಚುತ್ತಿರುವ ಚಿರತೆಗಳ (leopard) ಹಾವಳಿ ಬಗ್ಗೆ ಜನ ದೂರುತ್ತಲೇ ಇದ್ದಾರೆ ಆದರೆ ವನ್ಯಜೀವಿ ಕಾಡುಪ್ರದೇಶದಿಂದ ಊರೊಳಗೆ ಬಂದು ಸಾಕುಪ್ರಾಣಿಗಳನ್ನು ಎತ್ತೊಯ್ಯುವುದು ಮಾತ್ರ ನಿಂತಿಲ್ಲ. ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಜೈಕೃಷ್ಣ (Jaikrishna) ಎನ್ನುವವರು ಒಂದು ಇಟ್ಟಿಗೆ ಫ್ಯಾಕ್ಟರಿ (brick kiln) ನಡೆಸುತ್ತಿದ್ದಾರೆ. ಫ್ಯಾಕ್ಟರಿ ಆವರಣದಲ್ಲಿ ಪ್ರಾಯಶಃ ಅವರೇ ಸಾಕಿದ ನಾಯಿ ಇದ್ದುದನ್ನು ಗಮನಿಸಿದ ಚಿರತೆಯೊಂದು ಅದನ್ನು ಅನಾಮತ್ತಾಗಿ ಎತ್ತಿಕೊಂಡು ಕಾಡಿನೊಳಗೆ ಓಡಿಹೋಗುವ ದೃಶ್ಯ ಅಲ್ಲಿ ಅಳವಡಿಸಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ