‘ದುಡ್ಡಿಗಾಗಿ ನಾನು ಮದುವೆ ಆಗಿಲ್ಲ, ಅಂಥವರ ದಾರಿ ಬೇರೆ’; ಚೈತ್ರಾ ಕೋಟೂರ್ ತೆರೆದಿಟ್ಟ ಸತ್ಯ
ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೋಟೂರ್ ಅವರ ವಿವಾದಾತ್ಮಕ ಮದುವೆ ದೊಡ್ಡ ಸುದ್ದಿ ಆಗಿತ್ತು. ಅವರ ಮೇಲೆ ಹಲವು ಆರೋಪಗಳನ್ನು ಕೂಡ ಮಾಡಲಾಗಿತ್ತು. ಅವುಗಳ ಕುರಿತು ಈಗ ಚೈತ್ರಾ ಮನಬಿಚ್ಚಿ ಮಾತನಾಡಿದ್ದಾರೆ.
ನಟಿ ಚೈತ್ರಾ ಕೋಟೂರ್ (Chaithra Kotoor) ಅವರ ಮದುವೆ ಬಳಿಕ ನಡೆದ ಅಚಾನಕ್ ಬೆಳವಣಿಗೆಗಳು ಒಂದೆರಡಲ್ಲ. ತಾಳಿ ಕಟ್ಟಿದ ಕೆಲವೇ ಗಂಟೆಗಳಲ್ಲಿ ಅವರ ಮದುವೆ (Marriage) ಮುರಿದುಬಿತ್ತು. ಆಗ ಅನೇಕ ಸುದ್ದಿಗಳು ಹೊರಬಂದವು. ಚೈತ್ರಾ ಬಗ್ಗೆ ಹಲವು ಆರೋಪಗಳನ್ನು ಕೂಡ ಮಾಡಲಾಗಿತ್ತು. ಅವುಗಳ ಕುರಿತು ಈಗ ಚೈತ್ರಾ ಕೋಟೂರ್ ಮನಬಿಚ್ಚಿ ಮಾತನಾಡಿದ್ದಾರೆ. ‘ನಾನು ಹಣಕ್ಕಾಗಿ ಮದುವೆ ಆಗಿಲ್ಲ. ಹಣಕ್ಕಾಗಿ ಬದುಕುವವಳು ನಾನಾಗಿದ್ದರೆ ನನ್ನ ಬದುಕು ಬೇರೆ ರೀತಿ ಇರುತ್ತಿತ್ತು’ ಎಂದು ಅವರು ಹೇಳಿದ್ದಾರೆ.
ಚೈತ್ರಾ ಕೋಟೂರ್ ಅವರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆ ಕ್ಷಣಗಳ ಹಲವು ಫೋಟೋ ಮತ್ತು ವಿಡಿಯೋಗಳನ್ನು ಕೂಡ ಚೈತ್ರಾ ಹಂಚಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ಅವರ ಹೆಸರು ಕೂಡ ಬದಲಾಗಿದೆ. ಮಾ ಪ್ರಗ್ಯಾ ಭಾರತಿ ಎಂದು ಅವರು ತಮ್ಮನ್ನು ತಾವು ಕರೆದುಕೊಂಡಿದ್ದಾರೆ.
ಇದನ್ನೂ ಓದಿ:
ನಾನು ಯಾರನ್ನೂ ದ್ವೇಷಿಸುತ್ತಿಲ್ಲ, ಪ್ರೀತಿನೂ ಮಾಡಲ್ಲ; ಚೈತ್ರಾ ಕೋಟೂರ್
ಓಶೋ ಧ್ಯಾನ ಶಿಬಿರದಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ ಚೈತ್ರಾ ಕೋಟೂರ್