ರಾಮನಗರದಲ್ಲಿ ಸಂತ್ರಸ್ತ ಮಹಿಳೆಯಿಂದ ತರಾಟೆಗೊಳಗಾದ ನಂತರ ಕುಮಾರಸ್ವಾಮಿ ಸಹಾಯ ಮಾಡುವ ಭರವಸೆ ನೀಡಿದರು!

ಈ ಸಂದರ್ಭದಲ್ಲಿ ಒಬ್ಬ ಸಂತ್ರಸ್ತ ಮಹಿಳೆ, ನಿಮ್ಮಿಂದ ನಮಗೇನೂ ಪ್ರಯೋಜನವಿಲ್ಲ, ಸುಮ್ಮನೆ ಬಂದು ಹೋಗುವುದನ್ನು ಮಾಡುತ್ತೀರಿ, ನಮ್ಮ ಕಷ್ಟಗಳಿಗೆ ಯಾರೂ ಸ್ಪಂದಿಸುವುದಿಲ್ಲ ಎಂದು ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡಳು.

TV9kannada Web Team

| Edited By: Arun Belly

Sep 01, 2022 | 3:52 PM

ರಾಮನಗರ:  ಸತತ ಮಳೆಯಿಂದ ರಾಮನಗರ ಜಿಲ್ಲೆ ತತ್ತರಿಸಿದೆ. ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಮಳೆ ಸೃಷ್ಟಿಸಿದ ಅವಾಂತರದಿಂದ ನಿವಾಸಿಗಳು ಕಂಗಾಲಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗುರುವಾರ ಚನ್ನಪಟ್ಟಣ (Channapatna) ತಾಲ್ಲೂಕಿನ ಹುಣಸನಹಳ್ಳಿ, ಶ್ಯಾನುಭೋಗ ಹಳ್ಳಿ ಮತ್ತು ಕೊಂಡಾಪುರ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಒಬ್ಬ ಸಂತ್ರಸ್ತ ಮಹಿಳೆ, ನಿಮ್ಮಿಂದ ನಮಗೇನೂ ಪ್ರಯೋಜನವಿಲ್ಲ, ಸುಮ್ಮನೆ ಬಂದು ಹೋಗುವುದನ್ನು ಮಾಡುತ್ತೀರಿ, ನಮ್ಮ ಕಷ್ಟಗಳಿಗೆ ಯಾರೂ ಸ್ಪಂದಿಸುವುದಿಲ್ಲ ಎಂದು ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡಳು. ಮಾಜಿ ಮುಖ್ಯಮಂತ್ರಿಗಳು ಸಹಾಯ ಮಾಡುವ ಭರವಸೆ ನೀಡಿದರು.

Follow us on

Click on your DTH Provider to Add TV9 Kannada