ಫೋನಲ್ಲಿ ಮಾತಾಡುತ್ತಿದ್ದ ಸದಾನಂದ ಗೌಡರು ಮಾಧ್ಯಮಗಳ ಮೈಕ್ ಆನ್ ಇದೆ ಅಂತ ಅಶೋಕ ಹೇಳಿದಾಗ ಯೋಚನೆಗೆ ಬಿದ್ದರು!

ಫೋನಲ್ಲಿ ಮಾತಾಡುತ್ತಿದ್ದ ಸದಾನಂದ ಗೌಡರು ಮಾಧ್ಯಮಗಳ ಮೈಕ್ ಆನ್ ಇದೆ ಅಂತ ಅಶೋಕ ಹೇಳಿದಾಗ ಯೋಚನೆಗೆ ಬಿದ್ದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 04, 2023 | 1:52 PM

ಅಶೋಕ್ ಮಾತಿಗೆ ಪ್ಯಾದೆ ನಗೆ ಬೀರುವ ಗೌಡರು ಅಪದ್ಧವಾದದ್ದೇನಾದರೂ ಮಾತಾಡಿದೆನಾ ಅಂತ ಗಂಭೀರ ಮುಖಭಾವದಲ್ಲಿ ಯೋಚಿಸಲಾರಂಭಿಸುತ್ತಾರೆ!

ರಾಮನಗರ: ನಮ್ಮ ನಾಯಕರಿಗೆ ಮಿಡಿಯಾದ ಮೈಕ್ ಗಳೆಂದರೆ ಬಹಳ ಹೆದರಿಕೆ ಮಾರಾಯ್ರೇ. ಕಂದಾಯ ಸಚಿವ ಆರ್ ಅಶೋಕ್ (R Ashoka) ಅವರ ನೇತೃತ್ದದಲ್ಲಿ ಬಿಜೆಪಿಯ ಒಂದು ತಂಡ ರಾಮನಗರ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಚನ್ನಪಟ್ಟಣ (Channapatna) ತಲುಪಿದಾಗ ಒಂದು ಘಟನೆ ನಡೆಯಿತು. ಅಶೋಕ ಅವರು ಮಾಧ್ಯಮದವರೊಂದಿಗೆ ಮಾತಾಡುವಾಗ ಅವರ ಬಲಭಾಗದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ (Sadananda Gowda) ಜೋರಾಗಿ ಫೋನಲ್ಲಿ ಮಾತಾಡಲಾರಂಭಿಸುತ್ತಾರೆ. ಮಾಧ್ಯಮದ ಮೈಕ್ಗಳು ಆನ್ ಆಗಿದ್ದರಿಂದ ಅವರೆಲ್ಲಿ ಅಪದ್ಧವಾದದ್ದೇನಾದರೂ ಮಾತಾಡಿಯಾರು ಎಂಬ ಭಯದಲ್ಲಿ ಮೊದಲಿಗೆ ಮೈಕ್ ಆನ್ ಇದೆ ಅಂತ ಸನ್ನೆ ಮಾಡುತ್ತಾ ಹೇಳುತ್ತಾರೆ, ನಂತರ ಮೈಕ್ ಆನ್ ಇದೆ ಅಂತ ಬಾಯಿಂದ ಹೇಳುತ್ತಾರೆ. ಅವರ ಮಾತಿಗೆ ಪ್ಯಾದೆ ನಗೆ ಬೀರುವ ಗೌಡರು ಅಪದ್ಧವಾದದ್ದೇನಾದರೂ ಮಾತಾಡಿದೆನಾ ಅಂತ ಗಂಭೀರ ಮುಖಭಾವದಲ್ಲಿ ಯೋಚಿಸಲಾರಂಭಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ