BSY in Belagavi; ವಿರೂಪಾಕ್ಷಪ್ಪರಂತೆ ಸಿದ್ದರಾಮಯ್ಯ ಕೂಡ ನನ್ನ ಆಪ್ತರು: ಬಿಎಸ್ ಯಡಿಯೂರಪ್ಪ
ಕಾಂಗ್ರೆಸ್ ಪಕ್ಷದ ನಾಯಕರು ವಿರೂಪಾಕ್ಷಪ್ಪ ನಿಮ್ಮ ಆಪ್ತರೆಂದು ಅರೋಪಿಸುತ್ತಿದ್ದಾರೆ ಅಂತ ಹೇಳಿದ್ದಕ್ಕೆ ಅವರು ವಿರೂಪಾಕ್ಷಪ್ಪ ಮಾತ್ರವಲ್ಲ ಸಿದ್ದರಾಮಯ್ಯನವರು ಸಹ ನನ್ನ ಆಪ್ತರೇ ಎಂದು ನಗುತ್ತಾ ಉತ್ತರಿಸಿದರು.
ಬೆಳಗಾವಿ: ಅತ್ತ ಬೆಂಗಳೂರಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದರೆ ಇತ್ತ ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ಬೆಳಗಾವಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಮಾಧ್ಯಮದವರು ಮಾಡಾಳ್ ವಿರೂಪಾಕ್ಷಪ್ಪನವರ (Madal Virupakshappa) ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಮಾಧಾನ ಚಿತ್ತದಿಂದ, ಶಾಂತರಾಗಿ ಉತ್ತರ ನೀಡಿದರು. ವಿರೂಪಾಕ್ಷಪ್ಪ ಮತ್ತು ಅವರ ಮಗನ ಮೇಲೆ ಸರ್ಕಾರವಲ್ಲ, ಲೋಕಾಯುಕ್ತ ಕ್ರಮ ಜರುಗಿಸುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು ವಿರೂಪಾಕ್ಷಪ್ಪ ನಿಮ್ಮ ಆಪ್ತರೆಂದು ಅರೋಪಿಸುತ್ತಿದ್ದಾರೆ ಅಂತ ಹೇಳಿದ್ದಕ್ಕೆ ಅವರು ವಿರೂಪಾಕ್ಷಪ್ಪ ಮಾತ್ರವಲ್ಲ ಸಿದ್ದರಾಮಯ್ಯನವರು (Siddaramaiah) ಸಹ ನನ್ನ ಆಪ್ತರೇ ಎಂದು ನಗುತ್ತಾ ಉತ್ತರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ