ಈಶ್ವರಪ್ಪನಿಗೆ ತಲೆಯಲ್ಲಿ ಬುದ್ಧಿಯಲ್ಲ ಅಂತ ಮತ್ತೊಮ್ಮೆ ಹೇಳಿದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ!

ಆದರೆ ಸಿದ್ದರಾಮಯ್ಯನವರು ಹೇಳಿದ್ದು ಸ್ಪಷ್ಟವಾಗಿ ಕೇಳಿಸುತ್ತದೆ: ‘ಆ ಈಶ್ವರಪ್ಪನಿಗೆ ತಲೆಯಲ್ಲಿ ಬುದ್ಧಿಯಿಲ್ಲ, ಅವರ ಮಾತಿಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ,’ ಎಂದು ಸಿದ್ದರಾಮಯ್ಯ ಹೇಳುತ್ತಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ ಎಸ್ ಈಶ್ವರಪ್ಪ ಅವರ ನಡುವೆ ಅಂದಕಾಲತ್ತಿಲ್ ಜಗಳ ನಡೆದುಕೊಂಡು ಬಂದಿದೆ. ಅವರು ಇವರನ್ನು ದೂಷಿಸುವುದು ಇವರು ಅವರನ್ನು ಛೇಡಿಸುವುದು ನಿಲ್ಲುವ ಲಕ್ಷಣಗಳಿಲ್ಲ. ಹಾಗೆ ನೋಡಿದರೆ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು. ಒಂದೇ ಜಾತಿಯವರಾದ ಕಾರಣಕ್ಕೆ ಪರಸ್ಪರ ಟೀಕಿಸಬಾರದು ಅಂತೇನಿಲ್ಲ. ಆದರೆ ತಮ್ಮ ಜಾತಿಯನ್ನು ಉಲ್ಲೇಖಿಸಿ ಅವರು ಅರಚಾಡುತ್ತಿರುತ್ತಾರೆ. ಸೋಮವಾರ ವಿಜಯಪುರನಲ್ಲಿ ನಡೆದ ಒಂದು ಸಾರ್ವಜನಿಕ ಸಮಾರಂಭದಲ್ಲಿ ಖುದ್ದು ಸಿದ್ದಾರಾಮಯ್ಯನವರೇ, ‘ಈಶ್ವರಪ್ಪ ತಾನು ಕುರುಬ ಆಂತ ಹೇಳಿಕೊಳ್ಳಲು ಸಂಕೋಚಪಟ್ಟುಕೊಳ್ಳುತ್ತಾರೆ, ಅದರೆ ನಾನು ಕುರುಬ ಕುರುಬ ಕುರುಬ ಅಂತ ಎದೆತಟ್ಟಿ ಹೇಳಿಕೊಳ್ಳುತ್ತೇನೆ,’ ಅಂತ ಹೇಳಿದರು.

ಆ ಸಭೆ ಮುಗಿದ ನಂತರ ಪತ್ರಕರ್ತರು ಸಿದ್ದರಾಮಯ್ಯನವರಿಗೆ, ಈಶ್ಚರಪ್ಪನವರನ್ನು ಕುರಿತು ಏನೋ ಕೇಳುತ್ತಾರೆ. ಅವರೇನು ಕೇಳಿದ್ದು ಅಂತ ವಿಡಿಯೋನಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಆದರೆ ಸಿದ್ದರಾಮಯ್ಯನವರು ಹೇಳಿದ್ದು ಸ್ಪಷ್ಟವಾಗಿ ಕೇಳಿಸುತ್ತದೆ: ‘ಆ ಈಶ್ವರಪ್ಪನಿಗೆ ತಲೆಯಲ್ಲಿ ಬುದ್ಧಿಯಿಲ್ಲ, ಅವರ ಮಾತಿಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ,’ ಎಂದು ಸಿದ್ದರಾಮಯ್ಯ ಹೇಳುತ್ತಾರೆ.

ಆದರೆ ಸಿದ್ದರಾಮಯ್ಯ ಈ ಮಾತನ್ನ ಅದೆಷ್ಟು ಬಾರಿ ಹೇಳಿದ್ದಾರೋ? ಬದಲಾವಣೆಗಾದರೂ ಅವರು ಡೈಲಾಗನ್ನು ಬದಲಿಸಬೇಕು ಮಾರಾಯ್ರೇ.

ಮತ್ತೊಬ್ಬ ವರದಿಗಾರರು, ದೇವೇಗೌಡರು ನಿಮ್ಮ ಜಾತ್ಯಾತೀತತೆಯನ್ನು ಪ್ರಶ್ನಿಸಿದ್ದಾರೆ ಅಂತ ಹೇಳಿದಾಗ ‘ಸೆಕ್ಯುಲರ್ ಅಂತ ಪಕ್ಷದ ಹೆಸರಿಗೆ ಸೇರಿಸಿಕೊಂಡು ಬಿಜೆಪಿ ಜೊತೆ ದೋಸ್ತಿ ಮಾಡಿಕೊಳ್ಳುವವರಿಂದ ಜಾತ್ಯಾತೀತತೆಯ ಪಾಠ ಕಲಿಯುವ ಅವಶ್ಯಕತೆಯಿಲ್ಲ,’ ಎಂದರು.

ಇದನ್ನೂ ಓದಿ:  Viral Video: ಸಾಂಪ್ರದಾಯಿಕ ಉಡುಗೆ ತೊಟ್ಟು ಸ್ಕೇಟಿಂಗ್​ನಲ್ಲೇ ರಾಜಸ್ಥಾನಿ ಜಾನಪದ ನೃತ್ಯ ಮಾಡಿದ ಯುವತಿ; ಇಲ್ಲಿದೆ ವಿಡಿಯೋ

Click on your DTH Provider to Add TV9 Kannada