ಹ್ಯುಂಡೈ ಕ್ರೆಟಾ ಹೊಸ ವಿನ್ಯಾಸ ಮತ್ತು ಗೆಟಪ್ನೊಂದಿಗೆ ಮುಂದಿನ ವರ್ಷ ಭಾರತದ ಮಾರ್ಕೆಟ್ ಪ್ರವೇಶಿಸಲಿದೆ
ಕಂಪನಿ ಬಿಡುಗಡೆ ಮಾಡಿರುವ ಕಾರಿನ ಹೊರಾಂಗಣದ ಸ್ಕೆಚ್ಗಳನ್ನು ಗಮನಿಸಿದ್ದೇಯಾದರೆ, ಕ್ರೆಟಾದ ಮುಂಭಾಗ ಬದಲಾವಣೆ ಕಾಣಲಿದ್ದು ಅದು ಹೊಸ ಹ್ಯುಂಡೈ ಟುಕ್ಸಾನ್ ಮಾಡೆಲ್ ಅನ್ನು ಹೋಲುತ್ತದೆ.
ಹ್ಯುಂಡೈ ಭಾರತೀಯರ ಅಚ್ಚುಮೆಚ್ಚಿನ ಕಾರ್ ಕಂಪನಿ ಮತ್ತು ಅದರ ಉತ್ಪಾದನೆಯ ಕಾರುಗಳ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ. ಭಾರತದ ರಸ್ತೆಗಳ ಮೇಲೆ ಓಡಾಡುವ ಅತ್ಯಂತ ಜನಪ್ರಿಯ ಎಸ್ ಯು ವಿಗಳಲ್ಲಿ ಹ್ಯುಂಡೈ ಕ್ರೆಟಾ ಸಹ ಒಂದು. ಹಲವಾರು ಫೀಚರ್ ಗಳನ್ನು ಹೊಂದಿರುವ ಕ್ರೆಟಾ ನಿಸ್ಸಂಶಯವಾಗಿ ತುಂಬಾ ಸ್ಟೈಲಿಶ್ ಕೂಡ ಆಗಿದೆ. ಕ್ರೆಟಾ ಅಭಿಮಾನಿಗಳಿಗೆ ಒಂದು ಸಂತೋಷದ ಸುದ್ದಿ ಕಾದಿದೆ. ಮುಂದಿನ ವರ್ಷ ಮಧ್ಯಭಾಗದ ಹೊತ್ತಿಗೆ ಅದು ಇನ್ನಷ್ಟು ಹೊಸ ಸ್ಪೆಸಿಫಿಕೇಶನ್ ಗಳೊಂದಿಗೆ ಫೇಸ್ಲಿಫ್ಟ್ ಮಾಡಿಕೊಂಡು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಕಾರಿನ ಹೊಸ ವಿನ್ಯಾಸ ರೇಖಾಚಿತ್ರಗಳು ಸೋಶಿಯಲ್ ಮೀಡಿಯಾನಲ್ಲಿ ಹರಿದಾಡುತ್ತಿವೆ.
ಪ್ರಸ್ತುತವಾಗಿ ಭಾರತರದಲ್ಲಿ ಎರಡನೇ ತಲೆಮಾರಿನ ಹ್ಯುಂಡೈ ಕ್ರೆಟಾ ಮಾರಾಟವಾಗುತ್ತಿದೆ. ನಿಮಗೆ ನೆನಪಿರಬಹುದು, ಈ ಕಾರು ಮಾರ್ಚ್ 2020ರಲ್ಲಿ ಲಾಂಚ್ ಆಗಿತ್ತು. ಹೊಸ ಕ್ರೆಟಾ ಕಾರಿನ ವಿನ್ಯಾಸದ ರೇಖಾಚಿತ್ರಗಳನ್ನು ಹ್ಯುಂಡೈ ಮೋಟಾರ್ಸ್ ಇಂಡೋನೇಶ್ಯಾ ಬಿಡುಗಡೆ ಮಾಡಿದೆ. ಈ ದೇಶದ ಮಾರ್ಕೆಟ್ ನಲ್ಲಿ ಈ ಕಾರು ಒಂದು ಸಂಪೂರ್ಣ ಹೊಸ ಮಾಡೆಲ್ ಆಗಿ ಪ್ರವೇಶಿಸಲಿದೆ.
ಹಾಗೆಯೇ, ಎರಡನೇ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರು ಮೊದಲ ಬಾರಿಗೆ ಹೊಸ ವಿನ್ಯಾಸ ಮತ್ತು ಫೇಸ್ಲಿಫ್ಟ್ನೊಂದಿಗೆ ಭಾರತೀಯ ಮಾರ್ಕೆಟ್ ಗೆ ಎಂಟ್ರಿ ನೀಡಲಿದೆ.
ಕಂಪನಿ ಬಿಡುಗಡೆ ಮಾಡಿರುವ ಕಾರಿನ ಹೊರಾಂಗಣದ ಸ್ಕೆಚ್ಗಳನ್ನು ಗಮನಿಸಿದ್ದೇಯಾದರೆ, ಕ್ರೆಟಾದ ಮುಂಭಾಗ ಬದಲಾವಣೆ ಕಾಣಲಿದ್ದು ಅದು ಹೊಸ ಹ್ಯುಂಡೈ ಟುಕ್ಸಾನ್ ಮಾಡೆಲ್ ಅನ್ನು ಹೋಲುತ್ತದೆ.
ಸಂಯೋಜಿತ ಎಲ್ ಇ ಡಿ ಡಿ ಆರ್ ಎಲ್ ಗಳೊಂದಿಗೆ ಒಂದು ಹೊಸ ಪ್ಯಾರಾ ಮೆಟ್ರಿಕ್ ಜೆವೆಲ್ ಗ್ರಿಲ್ ಜೋಡಿಸಲಾಗಿದೆ. ಮುಂಭಾಗದ ಬಂಪರ್ ಮತ್ತು ಎಲ್ ಇ ಡಿ ಹೆಡ್ ಲ್ಯಾಂಪ್ ಗಳನ್ನು ಮರುವಿನ್ಯಾಸಗೊಳಿಸಲಾಗಿದೆ. ಎಲ್ ಇ ಡಿ ಹಿಂಭಾಗದ ದೀಪ ಮತ್ತು ಹಿಂಭಾಗದ ಬಂಪರ್ ನಲ್ಲೂ ಬದಲಾವಣೆ ಮಾಡಲಾಗಿದೆ.