ಮಳೆಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದು ಮತ್ತು ತಮ್ಮೊಂದಿಗಿದ್ದ ಮಾಜಿ ಸ್ಪೀಕರ್ ರಮೇಶ ಕುಮಾರ ಅವರನ್ನು ಮರೆತಿದ್ದು!
ಸಿದ್ದರಾಮಯ್ಯನವರಿಗೆ ಹಾರ ಹಾಕುವ ಭರದಲ್ಲಿ, ರಾಜ್ಯದ ಧೀಮಂತ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಮಾಜಿ ಸ್ಪೀಕರ್ ಮತ್ತು ಶಾಸಕ ರಮೇಶ್ ಕುಮಾರ್ ಅವರನ್ನು ಹಿಂದೆ ತಳ್ಳಲಾಗಿದೆ ಮತ್ತು ಅವರನ್ನು ಕೆಮೆರಾದ ಫ್ರೇಮಿನಿಂದ ಹೊರಗಿಡಲಾಗಿದೆ.
ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ನಮ್ಮ ರಾಜಕೀಯ ನಾಯಕರು ಭೇಟಿ ನೀಡಿ ರೈತರ, ಮನೆ ಕಳೆದುಕೊಂಡವರ ಕಷ್ಟಗಳನ್ನು ಕೇಳುತ್ತಿರುವುದು ಉತ್ತಮ ವಿಚಾರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆಯಿಂದ ತೊಂದರೆಗೆ ಸಿಕ್ಕಿರುವ ರಾಜ್ಯದ ನಾನಾ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ಕೋಲಾರ ಜಿಲ್ಲೆಯ ನರಸಾಪುರ ಗ್ರಾಮಕ್ಕೆ ಭೇಟಿ ನೀಡಿ ರೈತ ಮುನಿಯಪ್ಪ ಅವರ ಜಮೀನಿನಲ್ಲಿ ಮಳೆಯಿಂದಾಗಿ ಸರ್ವನಾಶ ಆಗಿರುವ ಆಲೂಗಡ್ಡೆ ಬೆಳೆಯನ್ನು ವೀಕ್ಷಿಸಿದರು.
ನಾಯಕರ ಬೆಂಬಲಿಗರಿಗೆ, ಅವರ ಕೃಪಾಕಟಾಕ್ಷಕ್ಕೆ ಬೀಳುವುದು ಎಷ್ಟು ಅತುರವಾಗಿರುತ್ತದೆ ಅಂತ ಈ ವಿಡಿಯೋನಲ್ಲಿ ಗೊತ್ತಾಗುತ್ತದೆ. ಸಿದ್ದರಾಮಯ್ಯನವರಿಗೆ ಹೂವಿನ ಹಾರ ಹಾಕಲು ಜನ ತೋರುತ್ತಿರುವ ಧಾವಂತ ಬೇಸರ ಹುಟ್ಟಿಸುತ್ತದೆ. ಯಾಕೆ ಗೊತ್ತಾ? ವಿಡಿಯೋ ಸೂಕ್ಷ್ಮವಾಗಿ ನೋಡಿದರೆ ನಿಮಗೆ ಗೊತ್ತಾಗುತ್ತದೆ.
ಸಿದ್ದರಾಮಯ್ಯನವರಿಗೆ ಹಾರ ಹಾಕುವ ಭರದಲ್ಲಿ, ರಾಜ್ಯದ ಧೀಮಂತ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಮಾಜಿ ಸ್ಪೀಕರ್ ಮತ್ತು ಶಾಸಕ ರಮೇಶ್ ಕುಮಾರ್ ಅವರನ್ನು ಹಿಂದೆ ತಳ್ಳಲಾಗಿದೆ ಮತ್ತು ಅವರನ್ನು ಕೆಮೆರಾದ ಫ್ರೇಮಿನಿಂದ ಹೊರಗಿಡಲಾಗಿದೆ. ಅಂತಿಮವಾಗಿ ಯಾರೋ ಒಬ್ಬ ಮಹಾನುಭಾವ ಅವರನ್ನು ಮುಂದೆ ಕರೆತರುತ್ತಾನೆ.
ಸಿದ್ದರಾಮಯ್ಯನವರಿಗೂ ರಮೇಶ ಕುಮಾರ ಜೊತೆಗಿದ್ದಾರೆ ಎಂಬ ಖಬರು ಇದ್ದಂತಿಲ್ಲ.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮುನಿಯಪ್ಪನವರ ಆಲೂಗಡ್ಡೆ ಬೆಳೆ ವೀಕ್ಷಿಸಿದ ನಂತರ ರಮೇಶ್ ಕುಮಾರ ಮತ್ತು ಸಿದ್ದರಾಮಯ್ಯ ಕಾಜಿಕಲ್ಲಹಳ್ಳಿಯಲ್ಲಿ ನಾಶವಾಗಿರುವ ಟೊಮೆಟೊ ಬೆಳೆಯನ್ನು ವೀಕ್ಷಿಸಿದರು.
ಅಪಾರ ಪ್ರಮಾಣದ ನಷ್ಟ ಅನುಭವಿಸಿರುವ ರೈತರಿಗೆ ನಾಯಕರ ಭೇಟಿಯಿಂದ ಏನಾದರೂ ಪ್ರಯೋಜನವಾಗುತ್ತದೆಯೇ?
ಇದನ್ನೂ ಓದಿ: ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್ಟಿಆರ್ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ