ಮುರುಘಾ ಮಠದ ಶ್ರೀಗಳು ಬಂಧನವಾಗಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಯಡಿಯೂರಪ್ಪ

ಇದೆಲ್ಲ ಆಗಬಾರದಿತ್ತು, ಈ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕೆ ತಮಗೆ ಇಷ್ಟವಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

TV9kannada Web Team

| Edited By: Apurva Kumar Balegere

Sep 02, 2022 | 3:22 PM

ಮಂಗಳೂರು:  ಒಂದು ವಾರದ ಹಿಂದೆ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ (Shivamurthy Swamiji) ವಿರುದ್ಧ ಪೋಕ್ಸೋ (POCSO) ಕಾಯ್ದೆ ಅಡಿ ಆರೋಪ ಕೇಳಿಬಂದು ಮೈಸೂರಲ್ಲಿ ಅವರ ವಿರುದ್ಧ ದೂರು ದಾಖಲಾದಾಗ; ಅವರು ನಿರಪರಾಧಿ, ಸುಳ್ಳು ಕೇಸಲ್ಲಿ ಸಿಕ್ಕಿಸಲಾಗಿದೆ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇಂದು (ಶುಕ್ರವಾರ) ಮಂಗಳೂರಲ್ಲಿ ಶ್ರೀಗಳು ಅರೆಸ್ಟ್ ಆಗಿರುವ ಕುರಿತು ಟಿವಿ9 ಕನ್ನಡ ವಾಹಿನಿಯ ಮಂಗಳೂರು ಪ್ರತಿನಿಧಿ ಮಾತಾಡಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದೆಲ್ಲ ಆಗಬಾರದಿತ್ತು, ಈ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕೆ ತಮಗೆ ಇಷ್ಟವಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

Follow us on

Click on your DTH Provider to Add TV9 Kannada