ಎದೆನೋವಿಂದ ಬಳಲುತ್ತಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಐಸಿಯುಗೆ ಸ್ಥಳಾಂತರ
ಜಿಲ್ಲಾಸ್ಪತ್ರೆಯ ಅಂಬ್ಯುಲೆನ್ಸ್ ಮೂಲಕ ಅವರನ್ನು ಐಸಿಯುಗೆ ಕರೆದೊಯ್ಯಲಾಯಿತು. ಶ್ರೀಗಳನ್ನು ಕರೆದೊಯ್ಯುವಾಗ ಪೊಲೀಸರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಚಿತ್ರದುರ್ಗ: ಎದೆನೋವಿನಿಂದ ಬಳಲುತ್ತಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ (Shivamurthy Swamiji) ಅವರನ್ನು ಮೊದಲು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿ ವೈದ್ಯರ ಸಲಹೆ ಮೇರೆಗೆ ತೀವ್ರ ಚಿಕಿತ್ಸಾ ಘಟಕಕ್ಕೆ (ಐಸಿಯು) (ICU) ಕಳಿಸಲಾಗಿದೆ. ಜಿಲ್ಲಾಸ್ಪತ್ರೆಯ (district hospital) ಅಂಬ್ಯುಲೆನ್ಸ್ ಮೂಲಕ ಅವರನ್ನು ಐಸಿಯುಗೆ ಕರೆದೊಯ್ಯಲಾಯಿತು. ಶ್ರೀಗಳನ್ನು ಕರೆದೊಯ್ಯುವಾಗ ಪೊಲೀಸರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
Latest Videos