ಮಾಜಿ ಪತಿಯ ಮೋಸ ಮತ್ತು ಪೊಲೀಸ್ ನಿಷ್ಕ್ರಿಯತೆ ವಿರುದ್ಧ ನ್ಯಾಯ ದೊರಕಿಸುವಂತೆ ಬಿಬಿಎಮ್ ಪಿ ಮಾಜಿ ಉಪ-ಮೇಯರ್ ಪ್ರಧಾನಿಗಳನ್ನು ಕೋರಿದ್ದಾರೆ
ಇವರ ಹೆಸರಿಗಿದ್ದ ಆಸ್ತಿಯನ್ನೆಲ್ಲ ಅನ್ವರ್ ಪಾಶಾ ಲಪಟಾಯಿಸಿದ್ದಾನೆ ಅಂತ ಹೇಳಿರುವ ಅವರು ಕೆ ಅರ್ ಪುರಂ ಪೊಲೀಸರು ತನಗೆ ರಕ್ಷಣೆ ಒದಗಿಸುತ್ತಿಲ್ಲ ಎಂದು ಅರೋಪಿಸುತ್ತಿದ್ದಾರೆ.
ಬೆಂಗಳೂರು: ನೇಣಿಗೆ ಕೊರಳೊಡ್ಡಿ ತನ್ನ ಪತಿ ಮತ್ತು ತಾನು ನೀಡಿರುವ ದೂರುಗಳಿಗೆ ಸ್ಪಂದಿಸಿದ ಪೊಲೀಸರಿಂದ ನ್ಯಾಯ ಕೊಡಿಸಿ ಎಂದು ವಿಡಿಯೋ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ಕಣ್ಣೀರಿಡುತ್ತಾ ಹಿಂದಿ ಭಾಷೆಯಲ್ಲಿ ಮನವಿ ಮಾಡಿಕೊಳ್ಳುತ್ತಿರುವ ಈ ಮಹಿಳೆ 2011 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪ-ಮೇಯರ್ ಆಗಿದ್ದ ಶಹತಾಜ್ ಖಾನುಮ್ (Shahtaj Khanum). ಅವರ ಪತಿ ಅನ್ವರ್ ಪಾಶಾ (Anwar Pasha) ನೀಡುತ್ತಿದ್ದ ಕಿರುಕುಳ ತಾಳಲಾಗದೆ ಅವರು 2011 ರಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಈ ವರ್ಷ ಜೂನ್ 6 ರಂದು ಅವರಿಗೆ ನ್ಯಾಯಾಲಯದಿಂದ ಡಿವೋರ್ಸ್ ಸಿಕ್ಕಿದೆ. ಇವರ ಹೆಸರಿಗಿದ್ದ ಆಸ್ತಿಯನ್ನೆಲ್ಲ ಅನ್ವರ್ ಪಾಶಾ ಲಪಟಾಯಿಸಿದ್ದಾನೆ ಅಂತ ಹೇಳಿರುವ ಅವರು ಕೆ ಅರ್ ಪುರಂ ಪೊಲೀಸರು ತನಗೆ ರಕ್ಷಣೆ ಒದಗಿಸುತ್ತಿಲ್ಲ ಎಂದು ಅರೋಪಿಸುತ್ತಿದ್ದಾರೆ.
Latest Videos