ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ ಮಾಜಿ ಸಚಿವ ಬಿ ಶ್ರೀರಾಮಲು
ಗಾಲಿ ಜನಾರ್ಧನ ರೆಡ್ಡಿ ವಿರುದ್ಧ ನೇರವಾಗಿ ಸಮರ ಸಾರುವ ಮೂಲಕ ಶ್ರೀರಾಮುಲು ಸುದ್ದಿಯಲ್ಲಿದ್ದಾರೆ. ಸೋಜಿಗದ ಸಂಗತಿಯೆಂದರೆ ಅವರು ಬಿಜೆಪಿಯ ರಾಜ್ಯಾಧ್ಯಕ್ಷನಾಗುವ ಇಂಗಿತ ವ್ಯಕ್ತಪಡಿಸಿದ್ದು. ಕೋಲಾರದಲ್ಲಿ ಮಾಧ್ಯಮದವರ ಜೊತೆ ಮಾತಾಡಿದ್ದ ಅವರು ತಾನು ಬಿಎಸ್ ಯಡಿಯೂರಪ್ಪನವರ ಕುಟುಂಬದ ಒಂದು ಭಾಗ ಮತ್ತು ವಿಜಯೇಂದ್ರ ತನಗೆ ತಮ್ಮನಿದ್ದಂತೆ ಎಂದು ಹೇಳಿದ್ದರು.
ಪ್ರಯಾಗ್ರಾಜ್ (ಉತ್ತರ ಪ್ರದೇಶ): ಕುಂಭಮೇಳ ಅರಂಭವಾಗಿ ಹೆಚ್ಚು ಕಡಿಮೆ ಒಂದು ತಿಂಗಳಾಗುತ್ತಾ ಬಂದರೂ ಪ್ರಯಾಗ್ ರಾಜ್ ಬಳಿಯ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವವರ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕಳೆದೆರಡು ವಾರಗಳಿಂದ ಸುದ್ದಿಯಲ್ಲಿರುವ ಮಾಜಿ ಸಚಿವ ಬಿ ಶ್ರೀರಾಮುಲು ಅವರು ಇಂದು ತಮ್ಮ ಪತ್ನಿ ಭಾಗ್ಯಲಕ್ಷ್ಮಿ ಜೊತೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಪ್ರಾಯಶಃ ರಾಮುಲು ಪುಣ್ಯ ಸ್ನಾನ ಮಾಡುತ್ತಿದ್ದ ಸ್ಥಳ ಸಮತಟ್ಟಾಗಿರಲಿಲ್ಲ ಮತ್ತು ಭಾಗ್ಯಲಕ್ಷ್ಮಿಯವರು ಸಹ ನೀರಲ್ಲಿ ಮುಳುಗಲು ಹೆದರುತ್ತಿದ್ದರು. ಶ್ರೀರಾಮುಲು ಅವರೇ ಅಂಜುವ ಅವಶ್ಯಕತೆ ಇಲ್ಲವೆಂದು ಅವರ ಕೈಹಿಡಿದು ಪುಣ್ಯಸ್ನಾನದ ಸಂಸ್ಕಾರ ನೆರವೇರಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ರಾಜ್ಯಾದ್ಯಂತ ಯಾತ್ರೆ ಮಾಡುವೆ: ಮಾಜಿ ಸಚಿವ ಶ್ರೀರಾಮುಲು