‘ಸಿಟಿ ಲೈಟ್ಸ್’ ಸಿನಿಮಾದ ಕಥೆ ಬಗ್ಗೆ ಸುಳಿವು ನೀಡಿದ ದುನಿಯಾ ವಿಜಯ್
ದುನಿಯಾ ವಿಜಯ್ ಅವರು ‘ಸಿಟಿ ಲೈಟ್ಸ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇಂದು (ಫೆಬ್ರವರಿ 10) ನಡೆದಿದೆ. ಈ ವೇಳೆ ವಿಜಯ್ ಅವರು ಸಿನಿಮಾ ತಂಡವನ್ನು ಪರಿಚಯಿಸಿಕೊಟ್ಟರು ಹಾಗೂ ಕಥೆ ಬಗ್ಗೆ ಕೂಡ ಮಾಹಿತಿ ನೀಡಿದರು. ಈ ಸಿನಿಮಾಗೆ ದುನಿಯಾ ವಿಜಯ್ ಅವರ 2ನೇ ಮಗಳು ಮೋನಿಷಾ ನಾಯಕಿ ಆಗಿದ್ದಾರೆ.
‘ಸಿಟಿಲೈಟ್’ ಸಿನಿಮಾದಲ್ಲಿ ಅನೇಕ ಹೊಸಬರಿಗೆ ದುನಿಯಾ ವಿಜಯ್ ಅವಕಾಶ ನೀಡುತ್ತಿದ್ದಾರೆ. ಮಗಳು ಮೋನಿಷಾ ನಾಯಕಿ ಆಗಿರುವ ಈ ಚಿತ್ರದ ಕತೆ ಏನು ಎಂಬುದನ್ನು ದುನಿಯಾ ವಿಜಯ್ ಹೇಳಿದ್ದಾರೆ. ‘ಇದು ಹೊಸ ವಿಷಯ. ಎಮೋಷನಲ್ ಆಗಿದೆ. ಅಳಿವಿನ ಅಂಚಿನಲ್ಲಿ ಇರುವ ಸಮುದಾಯದ ವಿಷಯ ಇದರಲ್ಲಿ ಇದೆ. ಆ ಸಮುದಾಯದಲ್ಲಿ ವಿದ್ಯಾವಂತರು ಕಡಿಮೆ ಇದ್ದಾರೆ. ಆ ಬಗ್ಗೆ ನನಗೆ ಬೇಸರ ಇದೆ. ಅಂಥ ಸಮುದಾಯದ ವಿಷಯವನ್ನು ಎತ್ತಿಹಿಡಿಯುವ ಪ್ರಯತ್ನ ಇದು’ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.