ಬಾನು ಮುಷ್ತಾಕ್ ದಸರಾ ಉತ್ಸವ ಉದ್ಘಾಟನೆ, ಅಸ್ಪಷ್ಟ ನಿಲುವು ಪ್ರಕಟಿಸಿದ ಕೆಎಸ್ ಈಶ್ವರಪ್ಪ

Updated on: Aug 25, 2025 | 4:00 PM

ಮೈಸೂರಲ್ಲಿ ಹೇಳಿಕೆಯೊಂದನ್ನು ನೀಡಿರುವ ಶಾಸಕ ತನ್ವೀರ್ ಸೇಠ್ ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನಡೆದಿದ್ದ ದಸರಾ ಮಹೋತ್ಸವಕ್ಕೆ ಅಪ್ಪಟ ನಿರೀಶ್ವರವಾದಿಯಾಗಿರುವ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಉದ್ಘಾಟಕರಾಗಿ ಕರೆಸಲಾಗಿತ್ತು, ಅವರು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು ಎಂದಿದ್ದಾರೆ. ಪೂಜೆ ಮಾಡಬೇಕೋ ಬೇಡವೋ ಅಂತ ನಿರ್ಧರಿಸುವವರು ಯಾರು?

ಶಿವಮೊಗ್ಗ, ಆಗಸ್ಟ್ 25: ಬಾನು ಮುಷ್ತಾಕ್ ದಸರಾ ಮಹೋತ್ಸವ ಉದ್ಘಾಟಿಸುವುದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮಾಧ್ಯಮಗಳ ಮುಂದೆ ದ್ವಂದ್ವ ನಿಲುವು ಪ್ರಕಟಿಸಿದರು. ಉದ್ಘಾಟನೆಗೆ ರಾಜ್ಯ ಸರ್ಕಾರ ಅವರನ್ನು ಆಯ್ಕೆ ಮಾಡಿರುವುದಕ್ಕೆ ತನ್ನ ತಕರಾರೇನೂ ಇಲ್ಲ ಎನ್ನುವ ಅವರು ದಸರಾ ಉದ್ಘಾಟನೆ ಮಾಡುವವರು ಮೊದಲು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡಬೇಕು, ಬಾನು ಮುಷ್ತಾಕ್ ಆವರು ಪೂಜೆ ಮಾಡುತ್ತಾರಾ ಇಲ್ಲವಾ ಅನ್ನೋದನ್ನು ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಈಶ್ವರಪ್ಪ ಹೇಳುತ್ತಾರೆ. ಹಿಂದೆ, ನಿಸಾರ್ ಅಹ್ಮದ್ ಅವರು ಮಾಡಿದ್ದರಲ್ಲ? ಅಂತ ಮಾಧ್ಯಮದವರು ಕೇಳಿದರೆ, ಅವರೊಬ್ಬರೇ ಅಲ್ಲ ಹಲವಾರು ಜನ ಮಾಡಿದ್ದಾರೆ, ಅವರೆಲ್ಲ ಮೊದಲು ಚಾಮುಂಡಿ ತಾಯಿಗೆ ಪೂಜೆ ಮಾಡಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಬಾನು ಮುಷ್ತಾಕ್ ಅವರು ಪೂಜೆ ಮಾಡದೆ ಕೇವಲ ದಸರಾ ಮಹೋತ್ಸವವನ್ನು ಉದ್ಘಾಟಿಸಿದರೆ ಅವರು ಮತ್ತು ಸಿದ್ದರಾಮಯ್ಯ ಹಿಂದೂಗಳಿಗೆ ಅಪಮಾನ ಮಾಡಿದಂತೆ ಎಂದು ಈಶ್ವರಪ್ಪ ಹೇಳುತ್ತಾರೆ.

ಇದನ್ನೂ ಓದಿ:  ಅಬ್ದುಲ್ ಕಲಾಂ ದೇಶದ ರಾಷ್ಟ್ರಪತಿ ಆಗಬಹುದಾದರೆ ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದು ತಪ್ಪಲ್ಲ: ರಾಮಲಿಂಗಾರೆಡ್ಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ