ಸುತ್ತೂರು ಮಠಕ್ಕೆ ಭೇಟಿ ನೀಡಿದ ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ತಾವಾಡುತ್ತಿದ್ದ ದಿನಗಳನ್ನು ನೆನಪಿಸಿದರು!
ಪಕ್ಕಾ ಸಸ್ಯಾಹಾರಿಯಾಗಿದ್ದ ಜಾವಗಲ್ ಶ್ರೀನಾಥ್ ತಮ್ಮ ಎಸೆತಗಳಲ್ಲಿ ಜನರೇಟ್ ಮಾಡುತ್ತಿದ್ದ ವೇಗ ಎದುರಾಳಿ ಬ್ಯಾಟರ್ ಗಳ ಎದೆಯಲ್ಲಿ ಭೀತಿ ಹುಟ್ಟಿಸುತಿತ್ತು. ಅವರು ಒಮ್ಮೆ 159.6 ಕಿಮೀ/ಗಂಟೆ ವೇಗದ ಎಕ್ಸ್ ಪ್ರೆಸ್ ಡೆಲಿವರಿಯೊಂದನ್ನು ಬೋಲ್ ಮಾಡಿದ್ದರು. ವೇಗದ ಬೌಲಿಂಗ್ ಮಾಡಲು ಮಾಂಸಾಹಾರಿಯಾಗುವ ಅವಶ್ಯಕತೆಯಿಲ್ಲ ಅಂತ ಅವರೊಮ್ಮೆ ಕಾಮೆಂಟೇಟರ್ ಗೆ ಹೇಳಿದ್ದರು.
ಮೈಸೂರು: 90 ರ ದಶಕದಲ್ಲಿ ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಅಗ್ರಮಾನ್ಯ ವೇಗದ ಬೌಲರ್ ಗಳಲ್ಲಿ ಒಬ್ಬrAraa, ಆಡುವ ದಿನಗಳಲ್ಲಿ ಮೈಸೂರು ಎಕ್ಸ್ ಪ್ರೆಸ್ ಅಂತ ಗುರುತಿಸಿಕೊಂಡಿದ್ದ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಜಾವಗಲ್ ಶ್ರೀನಾಥ್ (Javagal Srinath) ಅವರ ಬಗ್ಗೆ ಯುವಪೀಳಿಗೆಗೆ ಹೆಚ್ಚು ಗೊತ್ತಿರಲಾರದು. ಶ್ರೀನಾಥ್ ಇಂದು ತಮ್ಮ ಕುಟುಂಬದೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ (Sri Shivaratri Deshikendra Swamiji) ಆಶೀರ್ವಾದ ಪಡೆದರು. ನಂತರ ಅವರು ತಮ್ಮ ಪತ್ನಿಯೊಂದಿಗೆ ಸ್ವಾಮೀಜಿಯವರ ಸಮ್ಮುಖ ಸ್ವಲ್ಪ ಕಳೆದರು. ಈ ಸಂದರ್ಭದಲ್ಲಿ ಪ್ರಾಯಶಃ ಮಠದ ಆಡಳಿತಾಧಿಕಾರಿಯೊಬ್ಬರು ಒಂದು ಕಿರುಹೊತ್ತಿಗೆಯನ್ನು ಮಾಜಿ ಕ್ರಿಕೆಟಿಗನಿಗೆ ನೀಡಿದರು. ವಿಶ್ವವಿಖ್ಯಾತ ಬ್ಯಾಟರ್ ಗುಂಡಪ್ಪ ವಿಶ್ವನಾಥ್ (GR Vishwanath) ಅವರ ಶೋಧವಾಗಿದ್ದ ಶ್ರೀನಾಥ್ 1991 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ 2003 ರವರೆಗೆ ಭಾರತವನ್ನು ಪ್ರತಿನಿಧಿಸಿದರು. ಅಂಕಿ ಅಂಶಗಳಲ್ಲಿ ಅಭಿರುಚಿ ಇರುವರಿಗೆ ಮಾಹಿತಿ ನೀಡೋದಾದರೆ, 67 ಟೆಸ್ಟ್ ಪಂದ್ಯಗಳನ್ನಾಡಿದ ಅವರು 232 ವಿಕೆಟ್ ಪಡೆದರು ಮತ್ತು 229 ಒಂದು ದಿನದ ಪಂದ್ಯಗಳಲ್ಲಿ 315 ವಿಕೆಟ್ ಕಬಳಿಸಿದರು. ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಐಸಿಸಿ ಅವರನ್ನು ಮ್ಯಾಚ್ ರೆಫರಿಯಾಗಿ ನೇಮಕ ಮಾಡಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ