ಭ್ರೂಣ ಹತ್ಯೆ ನಿಲ್ಲಿಸಿ ಎಂದು ಸೀಮಂತ ಕಾರ್ಯಕ್ರಮದಲ್ಲಿ ಜಾಗೃತಿ‌ ಮೂಡಿಸಿದ ದಂಪತಿ

ಭ್ರೂಣ ಹತ್ಯೆ ನಿಲ್ಲಿಸಿ ಎಂದು ಸೀಮಂತ ಕಾರ್ಯಕ್ರಮದಲ್ಲಿ ಜಾಗೃತಿ‌ ಮೂಡಿಸಿದ ದಂಪತಿ

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on:Jan 10, 2024 | 11:45 AM

ಭ್ರೂಣ ಹತ್ಯೆ ಮಹಾ ಅಪರಾಧ, ಭ್ರೂಣ ಹತ್ಯೆ ನಿಲ್ಲಿಸಿ ಎಂದು ಸೀಮಂತ ಕಾರ್ಯಕ್ರಮದಲ್ಲಿ ದಂಪತಿ ಜಾಗೃತಿ‌ ಮೂಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ನಿಂಗಪ್ಪ ಜಿಗೇರಿ ಅವರ ಪತ್ನಿ ರೇಖಾ ಜೀಗೇರಿ ಅವರು ತಮ್ಮ ಸೀಮಂತ ಕಾರ್ಯಕ್ರಮದಲ್ಲಿ ಪೋಸ್ಟರ್ ಹಿಡಿದು ಜಾಗೃತಿ ಮೂಡಿಸಿದ್ದಾರೆ.

ಕೊಪ್ಪಳ, ಜನವರಿ 10: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಿಷೇಧವಿದ್ದರೂ ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಗರ್ಭಪಾತ ಮಾಡಿಸುತ್ತಿದ್ದ ದೊಡ್ಡ ಜಾಲವೇ ಪತ್ತೆಯಾಗಿತ್ತು. ಈ ದುರುಳರು ಅದೆಷ್ಟೋ ಬ್ರೂಣಗಳನ್ನು ಹತ್ಯೆ ಮಾಡಿದ್ದಾರೆ. ಸದ್ಯ ಕಂಬಿ ಎಣಿಸುತ್ತಿದ್ದಾರೆ. ಇನ್ನು ಭ್ರೂಣ ಹತ್ಯೆ (Feticide) ಮಹಾ ಅಪರಾಧ, ಭ್ರೂಣ ಹತ್ಯೆ ನಿಲ್ಲಿಸಿ ಎಂದು ಸೀಮಂತ ಕಾರ್ಯಕ್ರಮದಲ್ಲಿ ದಂಪತಿ ಜಾಗೃತಿ‌ ಮೂಡಿಸಿದ್ದಾರೆ. ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ (Kustagi) ತಾಲೂಕಿನ ಕಡೇಕೊಪ್ಪ ಗ್ರಾಮದ ನಿಂಗಪ್ಪ ಜಿಗೇರಿ ಅವರ ಪತ್ನಿ ರೇಖಾ ಜೀಗೇರಿ ಅವರು ತಮ್ಮ ಸೀಮಂತ ಕಾರ್ಯಕ್ರಮದಲ್ಲಿ ಪೋಸ್ಟರ್ ಹಿಡಿದು ಜಾಗೃತಿ ಮೂಡಿಸಿದ್ದಾರೆ. ಸೀಮಂತ ಕಾರ್ಯಕ್ರಮಕ್ಕೆ ಬಂದ ಸಂಬಂಧಿಗಳಿಗೆ, ಗ್ರಾಮದ ಜನರಿಗೆ ದಂಪತಿಗಳು ಭ್ರೂಣ ಹತ್ಯೆ ಮಹಾ ಅಪರಾಧ, ಭ್ರೂಣ ಹತ್ಯೆ ನಿಲ್ಲಿಸಿ ಎಂದು ಜಾಗೃತಿ ಮೂಡಿಸಿದ್ದಾರೆ. ದಂಪತಿಗಳ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Published on: Jan 10, 2024 11:07 AM