ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂ ಡಿಕೆ ಶಿವಕುಮಾರ್​​ಗೆ ದೇವೇಗೌಡ ಪ್ರಶ್ನೆ

Edited By:

Updated on: Aug 10, 2026 | 3:54 PM

ಮುಖ್ಯಾಂಶಗಳು

  • ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ವಾಗ್ದಾಳಿ
  • ಇಷ್ಟು ವರ್ಷ ಇಲ್ಲದ ಟೌನ್​ಶಿಪ್​ನ್ನು ಈಗ ಯಾಕೆ ಮಾಡುತ್ತಿದ್ದಾರೆ
  • ಬಿಡದಿ ಟೌನ್​ಶಿಪ್​ ಮಾಡುವ ಉದ್ದೇಶ ಏನು

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಿಡದಿ ಟೌನ್‌ಶಿಪ್‌ ಯೋಜನೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರ ಆತುರವನ್ನು ಪ್ರಶ್ನಿಸಿದ್ದಾರೆ. ಜೆಡಿಎಸ್ ಹಮ್ಮಿಕೊಂಡಿರುವ ರೈತರ ಪರ ಪಾದಯಾತ್ರೆಯಲ್ಲಿ ಮಾತನಾಡಿದ ದೇವೇಗೌಡರು, ಬೆಂಗಳೂರಿನಲ್ಲಿ 20,000ಕ್ಕೂ ಹೆಚ್ಚು ಬಿಡಿಎ ನಿವೇಶನಗಳು ಖಾಲಿಯಿದ್ದರೂ, 60 ದಿನಗಳಲ್ಲಿ ಟೌನ್‌ಶಿಪ್ ಮಾಡುವ ಅವಶ್ಯಕತೆ ಏನು ಎಂದು ಪ್ರಶ್ನಿಸಿದ್ದಾರೆ.

ರಾಮನಗರ, ಆಗಸ್ಟ್​ 10: ‘ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು. ಯಾರಿಗೆ ಅನುಕೂಲ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಆದ 60 ದಿನದಲ್ಲಿ ಮಾಡಲು ಏಕೆ ಹೊರಟಿದ್ದಾರೆ’ ಎಂದು ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಅವರು ಸಿಎಂ ಡಿಕೆ ಶಿವಕುಮಾರ್​​ಗೆ ಪ್ರಶ್ನೆ ಮಾಡಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಬಳಿಕ ಟಿವಿ9 ಜೊತೆಗೆ ಮಾತನಾಡಿದ ದೇವೇಗೌಡರು, ‘ಡಿಕೆ ಶಿವಕುಮಾರ್​ ಡಿಸಿಎಂ ಆಗಿದ್ದಾಗ ಅವರೇ ಉಸ್ತುವಾರಿ, ಆಗ ಏಕೆ ಮಾಡಿಲ್ಲ. ಇಷ್ಟು ವರ್ಷ ಇಲ್ಲದ ಟೌನ್​ಶಿಪ್​ನ್ನು ಈಗ ಏಕೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 20,000ಕ್ಕಿಂತ ಹೆಚ್ಚು ಬಿಡಿಎ ಸೈಟ್​ ಖಾಲಿ ಬಿದ್ದಿದೆ. ಹೆಚ್​.ಡಿ.ಕುಮಾರಸ್ವಾಮಿ ಟೌನ್​ಶಿಪ್​ ಯೋಜನೆ ಘೋಷಣೆ ಮಾಡಿದ್ದರು. ನಾವು ಈಗ ಮುಂದುವರಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರ ಟೌನ್​ಶಿಪ್​ ಕೂಸನ್ನು ಅಬಾರ್ಷನ್ ಮಾಡಿದ್ದು ಕಾಂಗ್ರೆಸ್’ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us