Channapatna By Poll Result: ಮಾಜಿ ಪ್ರಧಾನಿ ದೇವೇಗೌಡರ ನಿವಾಸದ ಬಳಿ ಸುಳಿಯದ ಕಾರ್ಯಕರ್ತರು

|

Updated on: Nov 23, 2024 | 12:06 PM

Channapatna By Poll Result: ಹಲವು ಹಗರಣಗಳ ಅರೋಪ, ವಕ್ಫ್ ಬೋರ್ಡ್ ನೋಟೀಸುಗಳ ಹೊರತಾಗಿಯೂ ರಾಜ್ಯದ ಉಪ ಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹಿರಿಮೆ ಸಾಧಿಸಿದೆ. ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದಾರೆ ಮತ್ತು ಇತರ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬೆಂಗಳೂರು ನಿವಾಸದ ಆವರಣದಲ್ಲಿ ನೀರವ ಮೌನ ಆವರಿಸಿದೆ. ವಿಶೇಷ ಸಂದರ್ಭಗಳ ಮಾತು ಹಾಗಿರಲಿ, ಸಾಮಾನ್ಯ ದಿನಗಳಲ್ಲೂ ಅವರ ಮನೆ ಆವರಣ ಜನರಿಂದ ತುಂಬಿರುತ್ತದೆ. ಚನ್ನಪಟ್ಟಣ ವಿಧಾನಸಭಾ ಉಪ ಚುನಾವನೆಯಲ್ಲಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಲುವುದು ಹೆಚ್ಚು ಕಡಿಮೆ ಖಚಿತವಾದಂತೆಯೇ ಜನ ದೇವೇಗೌಡರ ನಿವಾಸದ ಕಡೆ ಸುಳಿಯುತ್ತಿಲ್ಲ. ರಾಜಕೀಯವೇ ಹಾಗೆ ಮಾರಾಯ್ರೇ, ಗೆಲ್ಲುವವರಿಗೆ, ಗೆದ್ದವರಿಗೆ ಇಲ್ಲಿ ಹೆಚ್ಚಿನ ಮರ್ಯಾದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ಮನೆದೇವರಿಗೆ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ದಂಪತಿ