ಬೆಂಗಳೂರು: ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡರ (HD Devegowda) ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ, ಅವರ ಮುಖದಲ್ಲಿ ಆರೋಗ್ಯದ ಕಳೆ ಸೂಸುತ್ತಿದೆ ಮತ್ತು ಮೊದಲಿನ ಲವಿಲವಿಕೆ ಎದ್ದು ಕಾಣುತ್ತಿದೆ ಮಾರಾಯ್ರೇ. ಕೆಲದಿನಗಳ ಹಿಂದೆ ಗೌಡರು ಅಸ್ವಸ್ಥರಾಗಿದ್ದ ಸುದ್ದಿ ಕೇಳಿ ಕನ್ನಡಿಗರಲ್ಲಿ ಆತಂಕ ಮೂಡಿದ್ದು ಸುಳ್ಳಲ್ಲ. ಆದರೆ, ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಬೆಂಗಳೂರಲ್ಲಿಂದು ಲೋಕನಾಯಕ ಜಯಪ್ರಕಾಶ್ ನಾರಾಯಣ (Jayaprakash Narayan) ಮತ್ತು ಮಾಜಿ ಪ್ರಧಾನ ಮಂತ್ರಿ ವಿಪಿ ಸಿಂಗ್ (VP Singh) ಅವರ ಒಡನಾಡಿಯಾಗಿದ್ದ ಮುಸ್ಲಿಂ ಧುರೀಣ ಒಬೆದುಲ್ಲಾ (Obedullah) ಅವರು ಜೆಡಿಎಸ್ ಪಕ್ಷವನ್ನು ಸೇರಿದರು. ಇದೇ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ದೇವೇಗೌಡರ ಬೆಂಗಳೂರು ನಿವಾಸದಲ್ಲಿ ಸುದ್ದಿಗೋಷ್ಟಿಯೊಂದನ್ನು ಏರ್ಪಡಿಸಿದ್ದರು. ದೊಡ್ಡಗೌಡರು ಹಸನ್ಮುಖದಿಂದ ಸುದ್ದಿಗೋಷ್ಟಿಯಲ್ಲಿ ಬಂದು ಕೂರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ