ಸೊಂಟದ ಮೂಳೆ ಶಸ್ತ್ರಚಿಕಿತ್ಸೆ ಬಳಿಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತೆಲಂಗಾಣ ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್

|

Updated on: Dec 15, 2023 | 5:55 PM

ಚಂದ್ರಶೇಖರ್ ರಾವ್ ಚುನಾವಣೆಯಲ್ಲಿ ಸೋತರೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಅವರ ಗನ್ ಮ್ಯಾನ್, ಭದ್ರತಾ ಸಿಬ್ಬಂದಿ, ಬಿಆರ್ ಆಸ್ ಕಾರ್ಯಕರ್ತರಲ್ಲದೆ ನೂರಾರು ಜನ ಅಭಿಮಾನಿಗಳು ಸೇರಿದ್ದರು.

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆ (Telangana Assembly Polls) ಪ್ರಕಟವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಗರದ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಿಶ್ರಮಿಸುತ್ತಿದ್ದ ಕೆ ಚಂದ್ರಶೇಖರ್ ರಾವ್ (K Chandrashekar Rao) ಡಿಸೆಂಬರ್ 8 ರಂದು ನಿಸರ್ಗದ ಕರೆ ತೀರಿಸಿಕೊಳ್ಳಲು ಬಾತ್ ರೂಮಿಗೆ ಹೋದಾಗ ಜಾರಿಬಿದ್ದು ಸೊಂಟದ ಮೂಳೆ (hip bone) ಮುರಿದುಕೊಂಡಿದ್ದರು. ಅವರನ್ನು ಕೂಡಲೇ ನಗರದ ಪ್ರತಿಷ್ಠಿತ ಖಾಸಗಿ ಅಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಸೊಂಟದ ಮೂಳೆ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ರಾವ್ ಸುಮಾರು ಒಂದು ವಾರ ಕಾಲ ಆಸ್ಪತ್ರೆಯಲ್ಲೇ ಇದ್ದರು. ಇಂದು ಮಧ್ಯಾಹ್ನ ಅವರನ್ನು ಬಿಡುಗಡೆ ಮಾಡಲಾಗಿದ್ದು ವ್ಹೀಲ್ ಚೇರಲ್ಲಿ ಕುಳಿತೇ ಅವರು ಆಸ್ಪತ್ರೆಯಿಂದ ಹೊರಬರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಆಸ್ಪತ್ರೆಯ ಸಿಬ್ಬಂದಿ ಅವರನ್ನು ಕಾರಲ್ಲಿ ಕೂರಿಸಿದ ಬಳಿಕ ನಿಧಾನವಾಗಿ ಅದು ಮೂವ್ ಆಗುವುದನ್ನು ಸಹ ನೋಡಬಹುದು. ಚಂದ್ರಶೇಖರ್ ರಾವ್ ಚುನಾವಣೆಯಲ್ಲಿ ಸೋತರೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಅವರ ಗನ್ ಮ್ಯಾನ್, ಭದ್ರತಾ ಸಿಬ್ಬಂದಿ, ಬಿಆರ್ ಆಸ್ ಕಾರ್ಯಕರ್ತರಲ್ಲದೆ ನೂರಾರು ಜನ ಅಭಿಮಾನಿಗಳು ಸೇರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ