ಚಡಚಣ SBI ದರೋಡೆಕೋರರನ್ನು ಪೊಲೀಸ್ರು ಹೆಡೆಮುರಿಕಟ್ಟಿದ್ಹೇಗೆ ಗೊತ್ತಾ?

Edited By:

Updated on: Oct 10, 2025 | 7:25 AM

ಕಳೆದ ಸೆಪ್ಟೆಂಬರ್‌ 16ರಂದು ಸಂಜೆ 6 ಗಂಟೆ ಸುಮಾರಿಗೆ ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣದ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ನಡೆದಿದ್ದ ದರೋಡೆ ಕೇಸ್​ ಸಂಬಂಧ ಬಿಹಾರ ಮೂಲದ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ 9 ಕೆ.ಜಿ. ಚಿನ್ನ, 86 ಲಕ್ಷ ರೂ. ನಗದನ್ನು ಪೊಲೀಸರು ರಿಕವರಿ ಮಾಡಿದ್ದಾರೆ.

ವಿಜಯಪುರ, (ಅಕ್ಟೋಬರ್ 09): ಕಳೆದ ಸೆಪ್ಟೆಂಬರ್‌ 16ರಂದು ಸಂಜೆ 6 ಗಂಟೆ ಸುಮಾರಿಗೆ ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣದ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ನಡೆದಿದ್ದ ದರೋಡೆ ಕೇಸ್​ ಸಂಬಂಧ ಬಿಹಾರ ಮೂಲದ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ 9 ಕೆ.ಜಿ. ಚಿನ್ನ, 86 ಲಕ್ಷ ರೂ. ನಗದನ್ನು ಪೊಲೀಸರು ರಿಕವರಿ ಮಾಡಿದ್ದಾರೆ. ಬಿಹಾರ ಮೂಲದ ರಾಕೇಶಕುಮಾರ್‌ ಸಹಾನಿ (22), ರಾಜಕುಮಾರ್‌ ಪಾಸ್ವಾನ್‌ (21) ಮತ್ತು ರಕ್ಷಕಕುಮಾರ್‌ ಮಾತೋ (21) ಬಂಧಿತ ಆರೋಪಿಗಳಾಗಿದ್ದು, ಬಂಧಿತರು ಬ್ಯಾಂಕ್‌ ದರೋಡೆ ಮಾಡಿದ್ದ ಆರೋಪಿಗಳಿಗೆ ಗನ್‌ ಪೂರೈಕೆ ಮಾಡಿದ್ದರು ಎಂಬುವುದು ಗೊತ್ತಾಗಿದೆ. ಇನ್ನು ಆರೋಪಿಗಳನ್ನ ಹೇಗೆ ಹೆಡೆಮುರಿ ಕಟ್ಟಲಾಗಿದೆ ಎನ್ನುವ ಬಗ್ಗೆ ಎಸ್ಪಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

Published on: Oct 09, 2025 08:56 PM