ಶುಕ್ರವಾರ ಬೆಂಗಳೂರಿನ ಗ್ಯಾರೇಜೊಂದರಲ್ಲಿ ಬೆಂಕಿ ಆಕಸ್ಮಿಕ, 4 ಕಾರು 3 ಬೈಕ್ ಅಗ್ನಿಗಾಹುತಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 04, 2022 | 4:21 PM

ಗ್ಯಾರೇಜ್ ಸುತ್ತಮುತ್ತ ವಾಸವಾಗಿರುವ ಜನ ಸಿಲಿಂಡರ್ ಸ್ಫೋಟದ ಸದ್ದು ಕೇಳಿ ಹೊರಬಂದು ನೋಡಿದಾಗ ಗ್ಯಾರೇಜ್ ಹೊತ್ತಿ ಉರಿಯುತ್ತಿರುವುದು ಕಂಡಿದೆ. ಅವರು ಕೂಡಲೇ ಅಗ್ನಿ ಶಾಮಕದಳದ ಕಚೇರಿಗೆ ಫೋನ್ ಮಾಡಿದ್ದಾರೆ. ಫೈರ್ ಎಂಜಿನ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದರಿಂದ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೆ ವ್ಯಾಪಿಸುವುದು ತಪ್ಪಿದೆ.

ಬೇಸಿಗೆ ಬಂತು ಅಂತಾದರೆ, ಅಗ್ನಿ ಅವಘಡಗಳು (fire mishaps) ಶುರುವಿಟ್ಟುಕೊಳ್ಳುತ್ತವೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಬೆಂಕಿ ಆಕಸ್ಮಿಕಗಳು ನಗರ ಪ್ರದೇಶಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ (rural areas) ಅವು ಘಟಿಸುವುದನ್ನು ನಾವು ನೋಡುತ್ತಿರುತ್ತೇವೆ. ಶುಕ್ರವಾರ ಬೆಳಗಿನ ಜಾವ ಒಂದು ಅಗ್ನಿ ದುರಂತ ನಡೆದಿದೆ. ನಗರದ ವಿವೇಕ್ ನಗರ (Vivek Nagar) ಮುಖ್ಯರಸ್ತೆಯಲ್ಲಿರುವ ವನ್ನಾರ್ ಪೇಟ್ ಬಳಿಯಿರುವ ಗ್ಯಾರೋಜೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಪ್ರಾಥಮಿಕ ವರದಿಗಳ ಪ್ರಕಾರ ಗ್ಯಾರೇಜಿನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ (short circuit) ಎರಡು ಸಿಲಿಂಡರ್ಗಳು ಸ್ಫೋಟಗೊಂಡಿವೆ ಮತ್ತು ಅಲ್ಲಿದ್ದ ಹಲವಾರು ವಾಹನಗಳ ಪೈಕಿ 4 ಕಾರು ಮತ್ತು 3 ಬೈಕ್ಗಳು ಸುಟ್ಟುಹೋಗಿವೆ. ಸಿಲಿಂಡರ್ ಸ್ಫೋಟಗೊಂಡ ಸದ್ದು ಸುಮಾರು 500 ಮೀಟರ್ ದೂರದವರೆಗೆ ಕೇಳಿಸಿದೆಯಂತೆ. ಸದರಿ ಗ್ಯಾರೇಜ್ ನಾಸ್ಸೆರ್ ಹೆಸರಿನ ವ್ಯಕ್ತಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅವರಿಗೆ ಆಗಿರುವ ಹಾನಿಯ ಪ್ರಮಾಣ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ.

ಗ್ಯಾರೇಜ್ ಸುತ್ತಮುತ್ತ ವಾಸವಾಗಿರುವ ಜನ ಸಿಲಿಂಡರ್ ಸ್ಫೋಟದ ಸದ್ದು ಕೇಳಿ ಹೊರಬಂದು ನೋಡಿದಾಗ ಗ್ಯಾರೇಜ್ ಹೊತ್ತಿ ಉರಿಯುತ್ತಿರುವುದು ಕಂಡಿದೆ. ಅವರು ಕೂಡಲೇ ಅಗ್ನಿ ಶಾಮಕದಳದ ಕಚೇರಿಗೆ ಫೋನ್ ಮಾಡಿದ್ದಾರೆ. ಫೈರ್ ಎಂಜಿನ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದರಿಂದ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೆ ವ್ಯಾಪಿಸುವುದು ತಪ್ಪಿದೆ.

ಆದರೂ ಗ್ಯಾರೇಜಿಗೆ ಅಂಟಿಕೊಂಡಂತಿರುವ ಮಿಲ್ಕ್ ಪಾರ್ಲರ್ ಗೆ ಬೆಂಕಿ ವ್ಯಾಪಿಸಿ ಅದರ ಕೊಂಚ ಭಾಗ ಸುಟ್ಟಿದೆ. ಪಕ್ಕದಲ್ಲಿರುವ ಶ್ರೀ ಶಿವ ಶಕ್ತಿ ವೆಲ್ ದೇವಸ್ಥಾನದ ಟ್ರಸ್ಟ್​ಗೆ ಯಾವುದೇ ಹಾನಿಯಾಗಿಲ್ಲ.

ಇದನ್ನೂ ಓದಿ:

Follow us on