ಬಿದರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆಯ ಗಂಡನೇ ಅಧಿಕಾರ ನಡೆಸುತ್ತಾ ಅಮಾಯಕರ ಪ್ರಾಣ ಹಿಂಡುತ್ತಿದ್ದಾನೆ!
ಈ ಪ್ರಕರಣದಲ್ಲಿ ಸಚಿನ್ ಮತ್ತು ಪುಷ್ಪಾ ಇಬ್ಬರೂ ತಪ್ಪಿತಸ್ಥರು ಮತ್ತು ಅವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೆಂಡತಿಯ ಹೆಸರಲ್ಲಿ ಅವನು ಅಥವಾ ಅವರಿಬ್ಬರೂ ಸೇರಿ ಏನೆಲ್ಲಾ ಅಕ್ರಮಗಳನ್ನು ನಡೆಸಿದ್ದಾರೋ?
ಇಲ್ಲಿ ನಡೆಯುತ್ತಿರುವ ಅಂಧಾ ದರ್ಬಾರೊಂದನ್ನು ಗಮನಿಸಿ. ಈ ವಿಡಿಯೋ ನಮಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನಲ್ಲಿರುವ ಬಿದರೆಕೆರೆ ಗ್ರಾಮ ಪಂಚಾಯತ್ನಲ್ಲಿ (Bidarekere Gram Panchayat) ವಾರ್ಡ್ ಮತ್ತು ಗ್ರಾಮ ಸಭೆ ನಡೆಯುವಾಗ ಚಿತ್ರೀಕರಿಸಲಾಗಿದೆ. ಇಲ್ಲಿ ಇಬ್ಬರ ಮಹಿಳೆಯರು ಮತ್ತು ಒಬ್ಬ ಪುರುಷ ಕುರ್ಚಿಗಳ ಮೇಲೆ ಕೂತಿದ್ದರೆ ಗ್ರಾಮಸ್ಥರೆಲ್ಲ ಅವರ ಸುತ್ತ ನೆರೆದು ಯಾವುದೋ ಸಮಸ್ಯೆಯ ಬಗ್ಗೆ ಗಲಾಟೆ ಮಾಡುತ್ತಿದ್ದಾರೆ. ಅವರು ಎತ್ತಿರುವುದು ಗ್ರಾಮ ಮತ್ತು ವಾರ್ಡಿನ ಸಮಸ್ಯೆ ಅಗಿರಬಹುದು, ಅದರೆ ಬಿದರೆಕೆರೆ ಗ್ರಾಮದ ಮೂಲ ಸಮಸ್ಯೆ ಅಂದರೆ ಇಬ್ಬರು ಹೆಂಗಸರೊಂದಿಗೆ ನೀಲಿ ಅಂಗಿ ಮತ್ತು ಜೀನ್ಸ್ಧರಿಸಿ ಕುಳಿದ್ದಾನಲ್ಲ, ಅವನೇ ಇವರೆಲ್ಲರ ಸಮಸ್ಯೆ. ಅವನ ಹೆಸರು ಸಚಿನ್ (Sachin) ಅಂತೆ. ಇಬ್ಬರು ಮಹಿಳೆಯರಲ್ಲಿ ಹಳದಿ ಬಣ್ಣದ ಬಟ್ಟೆ ಧರಿಸಿರುವವರ ಹೆಸರು ಪುಷ್ಪಾ (Pushpa) ಆಗಿದ್ದು ಅವರು ಗ್ರಾಮ ಪಂಚಾಯಿತಿ ಆಧ್ಯಕ್ಷೆ ಆಗಿದ್ದಾರೆ. ಅವರ ಪತಿಯೇ ಈ ಸಚಿನ್. ಗ್ರಾಮಸ್ಥರು ಹೇಳುವ ಪ್ರಕಾರ ಪುಷ್ಪಾ ಪಂಚಾಯಿತಿಯಲ್ಲಿ ಕೇವಲ ಹೆಸರಿಗೆ ಅಧ್ಯಕ್ಷೆ. ಅವರ ಪರ ಅಧಿಕಾರ ನಡೆಸುವುದು, ನಿರ್ಣಯಗಳನ್ನು ತೆಗೆದುಕೊಳ್ಳೋದು ಇದೇ ಎಡಬಿಡಂಗಿ ಭೂಪ. ಅವನು ಮಾಡುತ್ತಿರುವುದು ಅಪ್ಟಟ ಕಾನೂನುಬಾಹಿರ.
ಸಚಿನ್ ಮನೆಯಲ್ಲಿ ಹೆಂಡತಿಯ ಮೇಲೆ ಅಧಿಕಾರ ಚಲಾಯಿಸುವುದಲ್ಲದೆ, ಬಿದರೆ ಕೆರೆ ಗ್ರಾಮ ಪಂಚಾಯಿತಿಯಲ್ಲಿ ಆಕೆಗೆ ಜನ ನೀಡಿರುವ ಅಧಿಕಾರವನ್ನೂ ಕಸಿದುಕೊಂಡಿದ್ದಾನೆ. ಈ ಗ್ರಾಮದಲ್ಲಿ ಅಕ್ಷರಸ್ಥರ ಸಂಖ್ಯೆ ಕಡಿಮೆ ಇರುವಂತಿದೆ. ಅದನ್ನೇ ಸಚಿನ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ.
ಸಭೆ ನಡೆಯುವಾಗ ಅವನು ಜನರ ಹೆಸರುಗಳನ್ನು ತಾನೇ ಬರೆದುಕೊಂಡು ಒಂದು ಪಟ್ಟಿ ತಯಾರಿಸುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ. ಅವನ ಪತ್ನಿ ಪುಷ್ಪಾ ಕೂಡ ಅನಕ್ಷರಸ್ಥೆಯೇ ಎಂಬ ಸಂದೇಹ ಮೂಡುತ್ತದೆ.
ಈ ಪ್ರಕರಣದಲ್ಲಿ ಸಚಿನ್ ಮತ್ತು ಪುಷ್ಪಾ ಇಬ್ಬರೂ ತಪ್ಪಿತಸ್ಥರು ಮತ್ತು ಅವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೆಂಡತಿಯ ಹೆಸರಲ್ಲಿ ಅವನು ಅಥವಾ ಅವರಿಬ್ಬರೂ ಸೇರಿ ಏನೆಲ್ಲಾ ಅಕ್ರಮಗಳನ್ನು ನಡೆಸಿದ್ದಾರೋ? ಪಂಚಾಯಿತಿಯ ಬೇರೆ ಸದಸ್ಯರು ಅದು ಹೇಗೆ ತಮ್ಮ ಅಸಲು ಅಧ್ಯಕ್ಷೆಯ ಸ್ಥಾನದಲ್ಲಿ ಈ ನಿಷ್ಪ್ರಯೋಜಕ, ಊರಿಗೆ ಭಾರವಾಗಿರುವ ವ್ಯಕ್ತಿ ನಿರ್ಧಾರ ತೆಗೆದುಕೊಳ್ಳುವುದನ್ನು ಸಹಿಸಿಕೊಳ್ಳುತ್ತಾರೆ ಅನ್ನೋದು ವಿವೇಚನೆಗೆ ಸಿಗದ ವಿಷಯವಾಗಿದೆ.
ಕನಿಷ್ಟ ಗ್ರಾಮ ಪಂಚಾಯಿತಿ ಅಧಿಕಾರಿಯಾದರೂ (ಪಿಡಿಓ) ಒಂದು ಕ್ರಮ ತೆಗೆದುಕೊಳ್ಳಬಾರದೆ?
ಇದನ್ನೂ ಓದಿ: ಮಾಜಿ ಸಂಸದ ರಮೇಶ ಕತ್ತಿ ಭಜನಾ ಕಾರ್ಯಕ್ರಮವೊಂದರಲ್ಲಿ ತನ್ಮಯತೆಯಿಂದ ಭಾಗಿಯಾಗಿರುವ ವಿಡಿಯೋ ವೈರಲ್