ಅಧ್ವಾನ ಸೃಷ್ಟಿಸಿದ ಉಚಿತ ಪ್ರಯಾಣ ಗ್ಯಾರಂಟಿ: ಸರ್ಕಾರಿ ಬಸ್ನಲ್ಲಿ ಪತ್ನಿಗೆ ಟಿಕೆಟ್ ಪಡೆಯಲು ಪತಿ ಹಿಂದೇಟು
ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಗ್ಯಾರಂಟಿ ಹಿನ್ನೆಲೆ ಸರ್ಕಾರಿ ಬಸ್ನಲ್ಲಿ ಪತ್ನಿಗೆ ಟಿಕೆಟ್ ಪಡೆಯಲು ಪತಿ ಹಿಂದೇಟು ಹಾಕಿದ್ದಾನೆ.
ಕೊಪ್ಪಳ: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ (congress) ನೀಡಿದ್ದ ಐದು ಗ್ಯಾರಂಟಿ ಪ್ರಯೋಜನಗಳನ್ನು ಪಡೆಯಲು ಜನರು ಕಾತರರಾಗಿದ್ದಾರೆ. ಇತ್ತೀಚೆಗೆ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಜನರು ಸೈಬರ್ ಸೆಂಟರ್ಗಳಿಗೆ ಮುಗಿಬಿದ್ದಿದ್ದರು. ಗ್ಯಾರಂಟಿ ಪ್ರಯೋಜನಗಳ ಕುರಿತಾಗಿ ಇನ್ನು ಸ್ಪಷ್ಟ ಚಿತ್ರಣವಿಲ್ಲ. ಹಾಗಾಗಿ ಹಲವೆಡೆ ಸಾರ್ವಜನಿಕರು ಮತ್ತು ಸರ್ಕಾರಿ ಸಿಬ್ಬಂಧಿಗಳ ಮಧ್ಯೆ ಸಂಘರ್ಷಗಳು ನಡೆಯುತ್ತಿವೆ. ಸದ್ಯ ಅಂತಹದ್ದೇ ಒಂದು ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹುಲಿಗಿ ಗ್ರಾಮದಲ್ಲಿ ನಡೆದಿದೆ.
ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಗ್ಯಾರಂಟಿ ಹಿನ್ನೆಲೆ ಸರ್ಕಾರಿ ಬಸ್ನಲ್ಲಿ ಪತ್ನಿಗೆ ಟಿಕೆಟ್ ಪಡೆಯಲು ಪತಿ ಹಿಂದೇಟು ಹಾಕಿದ್ದಾನೆ. ಈ ವೇಳೆ ಬಸ್ನಲ್ಲಿ ಪ್ರಯಾಣಿಕ ಹಾಗೂ ನಿರ್ವಾಹಕನ ನಡುವೆ ವಾಗ್ವಾದ ಉಂಟಾಗಿದೆ. ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆಂದು ಪ್ರಯಾಣಿಕ ವಾದಿಸಿದ್ದಾನೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos