Karnataka Bandh: ಕರ್ನಾಟಕ ಬಂದ್ ಗೆ ಬೆಂಬಲ ನೀಡಲು ಮಂಡ್ಯದಿಂದ ಫ್ರೀಡಂ ಪಾರ್ಕ್ಗೆ ನಡೆದು ಬಂದ ನಾಯಿ ರಾಂಬೋ Rambo!
ಇಂದಿನ ಕರ್ನಾಟಕ ಬಂದ್ ಗೆ ಬೆಂಬಲ ನೀಡಲು ಮಂಡ್ಯದಿಂದ Rambo ಹೆಸರಿನ ನಾಯಿಯೊಂದು (ರ್ಯಾಂಬೋ - ರಾಂಬೋ) ಬಂದಿದೆ. ಮಂಡ್ಯದ ಅಶೋಕ ನಗರದಿಂದ ಗೋಪಿನಾಥ್ ಮತ್ತು ಕುಟುಂಬ ತಮ್ಮ ಈ ನಾಯಿಯೊಂದಿಗೆ ಬಂದಿದ್ದಾರೆ. ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಡೆದಿರುವ ಪ್ರತಿಭಟನೆಯ ವೇಳೆ ಇದು ಗಮನ ಸೆಳೆಯಿತು.
ಬೆಂಗಳೂರು, ಸೆಪ್ಟೆಂಬರ್ 29: ಇಂದಿನ ಕರ್ನಾಟಕ ಬಂದ್ (Karnataka Bandh) ಗೆ ಬೆಂಬಲ ನೀಡಲು ಮಂಡ್ಯದಿಂದ Rambo ಹೆಸರಿನ ನಾಯಿಯೊಂದು (ರ್ಯಾಂಬೋ – ರಾಂಬೋ) ಬಂದಿದೆ. ಮಂಡ್ಯದ (Mandya) ಅಶೋಕ ನಗರದಿಂದ ಗೋಪಿನಾಥ್ ಮತ್ತು ಕುಟುಂಬ ತಮ್ಮ ಈ ನಾಯಿಯೊಂದಿಗೆ ಬಂದಿದ್ದಾರೆ. ಫ್ರೀಡಂ ಪಾರ್ಕ್ (Freedom Park) ನಲ್ಲಿ ನಡೆದಿರುವ ಪ್ರತಿಭಟನೆಯ ವೇಳೆ ಇದು ಗಮನ ಸೆಳೆಯಿತು. ಗೊಂಬೆಯೊಂದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮುಖವಿಟ್ಟು, ಅದನ್ನು ನಾಯಿ ಕಚ್ಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ ರೀತಿ ಶ್ವಾನ ವರ್ತಿಸಿತು. ನಾಯಿಯ ಬಾಯಲ್ಲಿ ಗೊಂಬೆಯನ್ನು ಕಚ್ಚಿಸಿ, ರೈತ ಗೋಪಿನಾಥ್ ತಮ್ಮ ಆಕ್ರೋಶ ಹೊರ ಹಾಕಿದರು. ನಾಯಿ ಆ ಗೊಂಬೆಯನ್ನು ಕಂಡು ಸಿಟ್ಟಿನಲ್ಲಿ ಕಾಲಿನ ಮೇಲೆ ಹಾಕಿಕೊಂಡು, ಕುಳಿತು ಕೊಳ್ಳುವುದ ಕಂಡು ಜನ ನಗೆಯಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos