ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರರಿಂದ ಭಾರೀ ಬೇಟೆ, 350 ಕೆಜಿ ತೂಕದ ಮುರು ಮೀನು ಬಲೆಗೆ
ಮಂಗಳೂರು: ಆಳ ಸಮುದ್ರದಲ್ಲಿ ಬೇಟೆಗೆ ತೆರಳಿದ್ದ ಮೀನುಗಾರರ ತಂಡಕ್ಕೆ ಬೃಹತ್ ಗಾತ್ರದ ಮೀನೊಂದು ಬಲೆಗೆ ಬಿದ್ದಿದೆ. ಸುಮಾರು 350 ಕೆಜಿ ತೂಕದ ಮುರು ಮೀನು ಬಲೆಗೆ ಬಿದ್ದಿದೆ. ಮಂಗಳೂರಿನಿಂದ (Mangalore) ಆಳ ಸಮುದ್ರಕ್ಕೆ (deep sea) ಮೀನುಗಾರಿಕೆಗೆ ಹೋದಾಗ ಮೊದಲ ಬಾರಿಗೆ ದೊಡ್ಡ ಗಾತ್ರದ ಮುರು ಮೀನು ಸಿಕ್ಕಿಬಿದ್ದಿದೆ.
ಮಂಗಳೂರು, ಸೆಪ್ಟೆಂಬರ್ 29: ಆಳ ಸಮುದ್ರದಲ್ಲಿ ಬೇಟೆಗೆ ತೆರಳಿದ್ದ ಮೀನುಗಾರರ (fishermen) ತಂಡಕ್ಕೆ ಬೃಹತ್ ಗಾತ್ರದ ಮೀನೊಂದು ಬಲೆಗೆ ಬಿದ್ದಿದೆ. ಸುಮಾರು 350 ಕೆಜಿ ತೂಕದ ಮುರು ಮೀನು ಬಲೆಗೆ ಬಿದ್ದಿದೆ. ಮಂಗಳೂರಿನಿಂದ (Mangalore) ಆಳ ಸಮುದ್ರಕ್ಕೆ (deep sea) ಮೀನುಗಾರಿಕೆಗೆ ಹೋದಾಗ ಮೊದಲ ಬಾರಿಗೆ ದೊಡ್ಡ ಗಾತ್ರದ ಮುರು ಮೀನು ಸಿಕ್ಕಿಬಿದ್ದಿದೆ. ಒಂದು ಕೆ.ಜಿ.ಗೆ 200 ರೂಪಾಯಿ ಬೆಳೆಬಾಳುವ ಮುರು ಮೀನು ಇದಾಗಿದೆ. ಒಟ್ಟಿನಲ್ಲಿ ಮೀನುಗಾರರು ಒಂದೇ ಮೀನಿನಿಂದ ಭರ್ಜರಿ ಆದಾಯ ಗಳಿಸಿದ್ದಾರೆ. ಸಾಮಾನ್ಯವಾಗಿ ಸಣ್ಣ ಗಾತ್ರದ ಮುರು ಮೀನು ಬೇಟೆಗೆ ಸಿಗುತ್ತದೆ. ಆದರೆ ಈ ಪಾಟಿ ದೊಡ್ಡದಾದ ಮೀನು ಸಿಕ್ಕಿರುವುದು ಇದೇ ಮೊದಲು. ಕಳೆದ ಮೂರು ದಿನಗಳ ಹಿಂದೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Fri, 29 September 23