Anganwadi Workers Protest: ಬೆಂಗಳೂರಿನ ಥರಗುಟ್ಟುವ ಚಳಿಯಲ್ಲಿ ಕಾರ್ಯಕರ್ತೆಯರು ನಿದ್ರೆ ಮಾಡುವುದು ಸಾಧ್ಯವಿರಲಿಲ್ಲ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 25, 2023 | 10:45 AM

ಬೆಂಗಳೂರಿನಂಥ ದೊಡ್ಡ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೆಳಗಿನ ಶೌಚಕ್ಕಾಗಿ ಎಷ್ಟೆಲ್ಲ ಪರದಾಡಿರಬಹುದೆಂದು ಒಮ್ಮೆ ಯೋಚಿಸಿ ನೋಡಿ.

ಬೆಂಗಳೂರು: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂಗನವಾಡಿ ಕಾರ್ಯಕರ್ಯತೆಯರು (Anganwadi Workers) ಕಳೆದ ರಾತ್ರಿಯನ್ನು ಬೆಂಗಳೂರು (Bengaluru) ಮಹಾನಗರದ ರಸ್ತೆಗಳ ಬದಿ ಥರಗುಟ್ಟುವ ಚಳಿಯಲ್ಲಿ (freezing cold) ಮತ್ತು ಸುರಿಯುತ್ತಿದ್ದ ಮಂಜಿನಲ್ಲಿ ಇಡೀ ರಾತ್ರಿಯನ್ನು ಜಾಗರಣೆ ಮಾಡುತ್ತಾ ಕಳೆದರು. ಅವರ ಕಷ್ಟಸುಖ ವಿಚಾರಿಸಬೇಕಿದ್ದ ಸಚಿವರು, ಅಧಿಕಾರಿಗಳು ತಮ್ಮ ತಮ್ಮ ಐಷಾರಾಮಿ ಬಂಗ್ಲೆಗಳಲ್ಲಿ ಎರಡೆರಡು ದುಬಾರಿ ರಗ್ಗುಗಳನ್ನು, ರಜಾಯಿಗಳನ್ನು ಹೊದ್ದು ರೂಮ್ ಹೀಟರ್ ಗಳನ್ನು ಹಾಕಿಕೊಂಡು ಬೆಚ್ಚಗೆ ಸುಖವಾಗಿ ನಿದ್ರಿಸುತ್ತಿದ್ದರೆ, ಸರಿಯಾಗಿ ಹೊದೆಯಲು ಬೆಡ್ ಶೀಟ್ ಗಳಿಲ್ಲದೆ ಕಾರ್ಯಕರ್ತೆಯರು ನಡುಗುತ್ತಾ ರಾತ್ರಿ ಕಳೆದರು. ಬೆಂಗಳೂರಿನಂಥ ದೊಡ್ಡ ನಗರದಲ್ಲಿ ಇವರೆಲ್ಲ ಬೆಳಗಿನ ಶೌಚಕ್ಕಾಗಿ ಎಷ್ಟೆಲ್ಲ ಪರದಾಡಿರಬಹುದೆಂದು ಒಮ್ಮೆ ಯೋಚಿಸಿ ನೋಡಿ. ಸಹೃದಯಿ ಜನರ ಮನಸಲ್ಲಿ ನಮ್ಮ ವ್ಯವಸ್ಥೆಗಳ ಬಗ್ಗೆ ಹೇವರಿಕೆ ಮತ್ತು ಅಂಗನಾವಾಡಿ ಕಾರ್ಯಕರ್ತೆತರನ್ನ ನಿರಂತರವಾಗಿ ನಿರ್ಲಕ್ಷಿಸುತ್ತಿರುವ ಸರ್ಕಾರಗಳ ಬಗ್ಗೆ ರೋಷವುಕ್ಕುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 25, 2023 10:27 AM