ಹೊಸಕೋಟೆ ಕಾಂಗ್ರೆಸ್ ಬ್ಲಾಕ್​​​ನಲ್ಲಿ ಒಡಕು, ಪಕ್ಷ ತೊರೆಯಲು ನಿರ್ಧರಿಸಿದ ಹಲವಾರು ಕಾರ್ಯಕರ್ತರು!

|

Updated on: Feb 09, 2023 | 3:08 PM

ತಮಗೆ ಅತೀವ ಬೇಸರ, ನಿರಾಶೆ, ಹತಾಷೆ ಮತ್ತು ದುಃಖವಾಗಿದ್ದು ಫೆಬ್ರುವರಿ 13 ರಂದು ಪಕ್ಷ ತೊರೆದು ನಾಗಾರಾಜ್ ಅವರ ಸಮಕ್ಷಮದಲ್ಲಿ ಬಿಜೆಪಿ ಸೇರಲು ನಿರ್ಧರಿಸಿದ್ದೇವೆ ಎಂದು ಕಣ್ಣೀರು ಹಾಕುತ್ತಾ ಹೇಳಿದರು.

ಹೊಸಕೋಟೆಯ (Hoskote) ತಾಲ್ಲೂಕು ಕಾಂಗ್ರೆಸ್ ನಲ್ಲಿ ಅಸಮಾಧಾನ, ಭಿನ್ನಮತ ತಾರಕಕ್ಕೇರಿ ಒಂದು ಬಣದ ಹಲವಾರು ಕಾರ್ಯಕರ್ತರು ಪಕ್ಷದ ಕಚೇರಿಗೆ ಬಣ್ಣ ಬಳಿದು, ಬೀಗ ಜಡಿದು, ಸಚಿವ ಎಮ್ ಟಿ ಬಿ ನಾಗರಾಜ್ (MTB Nagaraj) ಸಮಕ್ಷಮ ಬಿಜೆಪಿಗೆ ಸೇರುವ ನಿರ್ಧಾರ ಮಾಡಿದ್ದಾರೆ. ಹೊಸಕೋಟೆ ಪಟ್ಟಣದಲ್ಲಿಂದು ಮಾಧ್ಯಮದವರೊಂದಿಗೆ ಮಾತಾಡಿದ ಕಾಂಗ್ರೆಸ್ ಮುಖಂಡರೊಬ್ಬರು (Congress leader), ಬದುಕಿಡೀ ಪಕ್ಷಕ್ಕಾಗಿ ಬೆವರು ಸುರಿಸಿ ಜೀವ ತೇಯ್ದ ತಮ್ಮನ್ನು ಕಡೆಗಣಿಸಿ ನಿನ್ನೆ ಮೊನ್ನೆ ಪಕ್ಷ ಸೇರಿದವರಿಗೆ ಮನ್ನಣೆ ನೀಡಲಾಗುತ್ತಿದೆ, ತಮಗೆ ಅತೀವ ಬೇಸರ, ನಿರಾಶೆ, ಹತಾಷೆ ಮತ್ತು ದುಃಖವಾಗಿದ್ದು ಫೆಬ್ರುವರಿ 13 ರಂದು ಪಕ್ಷ ತೊರೆದು ನಾಗಾರಾಜ್ ಅವರ ಸಮಕ್ಷಮದಲ್ಲಿ ಬಿಜೆಪಿ ಸೇರಲು ನಿರ್ಧರಿಸಿದ್ದೇವೆ ಎಂದು ಕಣ್ಣೀರು ಹಾಕುತ್ತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ