Karwar: ಒಂದೇ ದಿನ ದೇವಸ್ಥಾನ, ದರ್ಗಾ ಮತ್ತು ಚರ್ಚ್​ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ

Karwar: ಒಂದೇ ದಿನ ದೇವಸ್ಥಾನ, ದರ್ಗಾ ಮತ್ತು ಚರ್ಚ್​ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 09, 2023 | 4:59 PM

ಕೊನೆಯಲ್ಲಿ ಅವರು ಚಂದಾವರದ ಸೆಂಟ್ ಜೇವಿಯರ್ ಚರ್ಚ್ ಗೆ ಭೇಟಿ ನೀಡಿದಾಗ ಅಲ್ಲಿನ ಫಾದರ್ ಅವರು ಕುಮಾರಸ್ವಾಮಿ ತಲೆಮೇಲೆ ಕೈಯಿಟ್ಟು ಪ್ರಾರ್ಥಿಸಿದರು

ಕಾರವಾರ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಯಾವ ಧರ್ಮದವರನ್ನೂ (religion) ನಿರಾಶೆಗೊಳಿಸುತ್ತಿಲ್ಲ ಮಾರಾಯ್ರೇ. ಜಿಲ್ಲೆಯ ಚಂದಾವರದಲ್ಲಿ (Chandawara) ಅವರು ಮೊದಲಿಗೆ ಹನುಮಾನ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅದಾದ ಬಳಿಕ ಹಜರತ್ ಮದನ್ ಹಜರತ್ ಉಸ್ಮಾನ್ ಶಾಹ ವಲಿ ದರ್ಗಾಗೆ ಹೋಗಿ ಪ್ರಾರ್ಥನೆ ಮಾಡಿದರು. ಕೊನೆಯಲ್ಲಿ ಅವರು ಚಂದಾವರದ ಸೆಂಟ್ ಜೇವಿಯರ್ ಚರ್ಚ್ ಗೆ ಭೇಟಿ ನೀಡಿದಾಗ ಅಲ್ಲಿನ ಫಾದರ್ ಅವರು ಕುಮಾರಸ್ವಾಮಿ ತಲೆಮೇಲೆ ಕೈಯಿಟ್ಟು ಪ್ರಾರ್ಥಿಸಿದರು. ಪ್ರಾರ್ಥನೆಯ ನಂತರ ಮಾಜಿ ಮುಖ್ಯಮಂತ್ರಿಗಳು ಕೆಥೋಲಿಕ್ ಕ್ರೈಸ್ತ ಸಂಪ್ರದಾಯದ ಹಾಗೆ ಕ್ಯಾಂಡಲ್ ಹಚ್ಚಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 09, 2023 04:58 PM