This friendship is divine: ಇದು ತೋತಾ-ಮೈನಾ ಕಿ ಕಹಾನಿ ಅಲ್ಲ, ಪಶ್ಚಿಮ ಬಂಗಾಳದ ಅಂಕಿತಾ-ಮೈನಾ ಕಿ ಕಹಾನಿ!
ಪ್ರತಿದಿನ ಅಂಕಿತಾ ಶಾಲೆಗೆ ಹೋಗಿವಾಗ ಮೈನಾ ಹಾರಿಬಂದು ಅವಳ ತಲೆಯ ಮೇಲೆ ಕೂರುತ್ತದೆ ಮತ್ತು ದಿನವಿಡೀ ಅವಳ ಜೊತೆಯೇ ಇರುತ್ತದೆ. ಇದಕ್ಕೆ ಮೊದಲು 5 ಮೈನಾಗಳ ಜೊತೆ ಅಂಕಿತಾಗೆ ದೋಸ್ತಿ ಇತ್ತಂತೆ, ಮೀಠು ಆರನೇಯದ್ದು.
ಪಶ್ಚಿಮ ಬಂಗಾಳ ದುರ್ಗಾಪುರ (Durgapur) ಬಳಿಯ ಗ್ರಾಮವೊಂದರಲ್ಲಿ ಒಂದನೇ ತರಗತಿಯಲ್ಲಿ ಓದುವ ಅಂಕಿತಾ ಬಗ್ಡಿ (Ankita Bagdi) ಮತ್ತು ಒಂದು ಗೊರವಂಕ ಪಕ್ಷಿಯ (ಸಾಮಾನ್ಯವಾಗಿ ಮೈನಾ ಅಂತಲೇ ಕರೆಯಲಾಗುತ್ತದೆ) (Myna) ನಡುವಿನ ಸ್ನೇಹ ವರ್ಣನೆಗೆ ನಿಲುಕದಂಥದ್ದು ಮಾರಾಯ್ರೇ. ಈ ಪುಟ್ಟ ಬಾಲೆ ತನ್ನೊಂದಿಗೆ ಶಾಲೆಗೆ ಬರುವ ಪುಟ್ಟ ಹಕ್ಕಿಗೆ ಮೀಠು (Meethu) ಅಂತ ಹೆಸರಿಟ್ಟಿದ್ದಾಳೆ. ಇವರಿಬ್ಬರ ನಡುವಿನ ಬಾಂಧವ್ಯ ಊರಲ್ಲಿ ಆಕರ್ಷಣೆಯ ಬಿಂದುವಾಗಿದೆ. ಅಂಕಿತಾ ಎಲ್ಲೇ ಹೋದರೂ ಮೀಠು ಹಿಂಬಾಲಿಸುತ್ತದೆ!
‘ಮೈನಾಗೆ ನಾನು ಮೀಠು ಅಂತ ಹೆಸರಿಟ್ಟಿದ್ದೇನೆ. ಅದು ನನ್ನೊಂದಿಗೆ ಪ್ರತಿದಿನ ಶಾಲೆಗೆ ಬರುತ್ತದೆ. ಮೀಠು ಶಾಲೆಗೆ ಬಾರದ ನನಗೆ ಬಹಳ ಬೇಜಾರಾಗುತ್ತದೆ,’ ಎಂದು ಅಂಕಿತಾ ಹೇಳುತ್ತಾಳೆ.
ಪ್ರತಿದಿನ ಅಂಕಿತಾ ಶಾಲೆಗೆ ಹೋಗಿವಾಗ ಮೈನಾ ಹಾರಿಬಂದು ಅವಳ ತಲೆಯ ಮೇಲೆ ಕೂರುತ್ತದೆ ಮತ್ತು ದಿನವಿಡೀ ಅವಳ ಜೊತೆಯೇ ಇರುತ್ತದೆ. ಇದಕ್ಕೆ ಮೊದಲು 5 ಮೈನಾಗಳ ಜೊತೆ ಅಂಕಿತಾಗೆ ದೋಸ್ತಿ ಇತ್ತಂತೆ, ಮೀಠು ಆರನೇಯದ್ದು.
‘ಅಂಕಿತಾ ಮೇಲೆ ಮೈನಾ ಪ್ರಾಣವನ್ನೇ ಇಟ್ಟುಕೊಂಡಿದೆ ಮತ್ತು ಅವಳಿಗೋಸ್ಕರವೇ ಅದು ಶಾಲೆಗೆ ಬರುತ್ತದೆ. ಬೇರೆ ಮಕ್ಕಳೊಂದಿಗೂ ಮೈನಾ ಸ್ನೇಹದಿಂದಿರುತ್ತದೆ. ಶಾಲೆ ಮುಗಿದ ಮೇಲೆ ಮಕ್ಕಳೆಲ್ಲ ಮನೆಗೆ ಹೋಗುವಾಗ ಮೈನಾ ಕೂಡ ಅವರೊಂದಿಗೆ ಹೊರಟುಬಿಡುತ್ತದೆ. ನಮಗೂ ಮೈನಾ ಮೇಲೆ ಪ್ರೀತಿಯುಂಟಾಗಿದೆ,’ ಎಂದು ಶಾಲೆಯ ಸಿಬ್ಬಂದಿ ಪೂರ್ಣಿಮಾ ಲೋಹರ್ ಹೇಳುತ್ತಾರೆ.
ಮೈನಾದ ಪ್ರತಿಯೊಂದು ವರ್ತನೆ ಅಂಕಿತಾಗೆ ಅರ್ಥವಾಗುತ್ತದಂತೆ. ಅವರ ನಡುವಿನ ಸ್ನೇಹ ಅದೆಷ್ಟು ಗಾಢವಾಗಿದೆಯೆಂದರೆ, ಯಾವತ್ತಾದರೂ ಪಕ್ಷಿ ಶಾಲೆಗೆ ಬರದಿದ್ದರೆ ಬೇರೆ ಮಕ್ಕಳು ಸಹ ಅಂಕಿತಾಳನ್ನು ನೋಡಿ ಬೇಜಾರು ಮಾಡಿಕೊಳ್ಳುತ್ತಾರೆ.
‘ನಿರ್ದಿಷ್ಟವಾಗಿ ಅದು ಅಂಕಿತಾಳನ್ನು ನೋಡಲು ಬರುತ್ತದೆಯಾದರೂ ಬೇರೆ ಮಕ್ಕಳೊಂದಿಗೂ ಉತ್ತಮ ಒಡನಾಟ ಇಟ್ಟುಕೊಂಡಿದೆ. ಮೈನಾ, ಮಕ್ಕಳೊಂದಿಗೆ ಶಾಲೆಯಲ್ಲೇ ಇರೋದ್ರಿಂದ ಅವರು ತಮ್ಮ ಡಬ್ಬಗಳಿಂದ ಅದಕ್ಕೆ ಆಹಾರ ನೀಡುತ್ತಾರೆ. ಮಧ್ಯಾಹ್ನ 1 ಗಂಟೆಗೆ ಶಾಲೆ ಸಮಯ ಮುಗಿದಾಗ ಅದು ಕೂಡ ಮಕ್ಕಳೊಂದಿಗೆ ಹೋಗಿಬಿಡುತ್ತದೆ,’ ಎಂದು ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ರಾಮದಾಸ್ ಸೊರೇನ್ ಹೇಳುತ್ತಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದ ಸಚಿವೆ ಸ್ಮೃತಿ ಇರಾನಿ
ಅಂಕಿತಾ ಮತ್ತು ಮೈನಾ ನಡುವಿನ ಸ್ನೇಹ ಕಂಡು ಒಂದು ವಿಷಯ ಸ್ಪಷ್ಟವಾಗುತ್ತದೆ ಮಾರಾಯ್ರೇ. ಮಾನವರು ಪಶುಪಕ್ಷಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳಲಾರರಾದರೂ ಅವರ ನಡುವೆ ಆಳವಾದ ಭಾವನಾತ್ಮಕ ಸಂಬಂಧ ಬೆಳೆಯುವುದು ಸಾಧ್ಯವಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ