ಅಬ್ಬಬ್ಬಾ ಏನ್ ಜನ ಗುರು! ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಭಕ್ತ ಸಾಗರದ ನಡುವೆ ಭವ್ಯ ರಥೋತ್ಸವಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ತಲೆ ಎತ್ತಿ ನಿಂತಿರುವ ಭಕ್ತರ ಸಮೂಹ. ಇರುವೆ ಸಾಲಿನಂತೆ ಸಾಗುತ್ತಿರುವ ಜನರ ದಂಡು.ಇದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಕಂಡುಬಂದ ದೃಶ್ಯ. ಹೌದು..ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ನೆರವೇರಿತು. ನಮ್ಮ ಹೆಮ್ಮೆಯ ಕೊಪ್ಪಳ ಮೂಲದವರೇ ಆದ, ಸದ್ಯ ಮೇಘಾಲಯ ರಾಜ್ಯಪಾಲರಾಗಿರುವ ಗೌರವಾನ್ವಿತ ಹೆಚ್.ಸಿ. ವಿಜಯಶಂಕರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದ್ದು, ಲಕ್ಷಾಂತರ ಭಕ್ತರ ಹರ್ಷೋದ್ಗಾರ, ಮೈಸೂರುಪಾಕ್-ಪ್ರಸಾದದ ಘಮಲು ಹಾಗೂ ಅಜ್ಜನ ದರ್ಶನಕ್ಕಾಗಿ ಜನಸಾಗರವೇ ಹರಿದುಬಂದಿದೆ.
ಕೊಪ್ಪಳ, (ಜನವರಿ 05): ಭಕ್ತ ಸಾಗರದ ನಡುವೆ ಭವ್ಯ ರಥೋತ್ಸವ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ತಲೆ ಎತ್ತಿ ನಿಂತಿರುವ ಭಕ್ತರ ಸಮೂಹ. ಇರುವೆ ಸಾಲಿನಂತೆ ಸಾಗುತ್ತಿರುವ ಜನರ ದಂಡು.ಇದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಕಂಡುಬಂದ ದೃಶ್ಯ. ಹೌದು..ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ (Koppal Gavisiddheshwar Rathotsav) ಇಂದು ಅದ್ದೂರಿಯಾಗಿ ನೆರವೇರಿತು. ನಮ್ಮ ಹೆಮ್ಮೆಯ ಕೊಪ್ಪಳ ಮೂಲದವರೇ ಆದ, ಸದ್ಯ ಮೇಘಾಲಯ ರಾಜ್ಯಪಾಲರಾಗಿರುವ ಗೌರವಾನ್ವಿತ ಹೆಚ್.ಸಿ. ವಿಜಯಶಂಕರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದ್ದು, ಲಕ್ಷಾಂತರ ಭಕ್ತರ ಹರ್ಷೋದ್ಗಾರ, ಮೈಸೂರುಪಾಕ್-ಪ್ರಸಾದದ ಘಮಲು ಹಾಗೂ ಅಜ್ಜನ ದರ್ಶನಕ್ಕಾಗಿ ಜನಸಾಗರವೇ ಹರಿದುಬಂದಿದೆ. ಇನ್ನು ಕೊಪ್ಪಳ ಅಜ್ಜನ ಜಾತ್ರೆ ಡ್ರೋಣ್ ದೃಶ್ಯ ನೋಡಿದರೆ ಎಲ್ಲಿ ನೋಡಿದರೂ ಜನ. ನೀವೂ ಒಂದು ಸಲ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

