ಕೆಲವೇ ಕೆಲವು ನಿಮಿಷ ಸುರಿದ ಸಣ್ಣ ಮಳೆಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್..!
ಬೆಂಗಳೂರಿನಲ್ಲಿ ಬೇಸಿಗೆಯ ಮೊದಲ ಮಳೆಯಾಗಿದೆ. ಕೆಂಡದಂಥಾ ಬಿಸಿಲಿಗೆ ಬಸವಳಿದ ಬೆಂಗಳೂರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ನಗರದ ಕೆಲ ಭಾಗಗಳಲ್ಲಿ ಇಂದು ಸಣ್ಣ ಪ್ರಮಾಣದ ಮಳೆಯಾಗಿದ್ದು, ವರ್ಷದ ಮೊದಲ ಮಳೆ ಕಂಡು ಬೆಂಗಳೂರಿಗರು ಫುಲ್ ಖುಷ್ ಆಗಿದ್ದಾರೆ. ಆದ್ರೆ, ಕೆಲವೇ ಕೆಲವು ನಿಮಿಷ ಸುರಿದ ಮಳೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರು, (ಮಾರ್ಚ್ 11): ಬೇಸಿಗೆಯ ಬಿರುಬಿಸಿಲಿನಿಂದ ಕಂಗಾಲಾಗಿದ್ದ ಬೆಂಗಳೂರಿಗೆ (Bengaluru) ವರುಣ ಸಿಂಚನವಾಗಿದೆ. ನಗರದ ಹಲವೆಡೆ ಇಂದು (ಮಾರ್ಚ್ 11) ಸಂಜೆ ಏಕಾಏಕಿ ಮಳೆಯಾಗಿದ್ದು, ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ. ಕಲವೇ ಕೆಲವು ನಿಮಷ ಮಾತ್ರ ಸುರಿದ ಮಳೆಗೆ ಡಬಲ್ ರೋಡ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು. ಆಫೀಸ್ ಮುಗಿಸಿಕೊಂಡು ಮನೆಗೆ ತೆರಳುವ ಸಮಯ ಒಂದು ಕಡೆಯಾದರೆ ಮತ್ತೊಂದೆಡೆ ಇದೇ ಸಮಯಕ್ಕೆ ಮಳೆಯಾಗಿದೆ, ಇದರಿಂದ ನಗರದ ಹಲವೆಡೆ ಟ್ರಾಫಿಕ್ ಸಮಸ್ಯೆಯಾಗಿದೆ.