ತುಮಕೂರು: ಎರಡು ಬಾರಿಯೂ ಸಿದ್ದರಾಮಯ್ಯರಿಂದ ಸಿಎಂ ಹುದ್ದೆ ತಪ್ಪಿಸಿಕೊಂಡ ಜಿ ಪರಮೇಶ್ವರ್ ಆ ಕಹಿಯನ್ನು ಮರೆತಿದ್ದಾರೆ!

|

Updated on: Sep 06, 2023 | 4:35 PM

ಆದರೆ, ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಕೇಳಿ ಬಂದ ಕಾರಣ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ ಹೆಸರುಗಳು ಆ ಉನ್ನತ ಸ್ಥಾನಕ್ಕಾಗಿ ಮುಂಚೂಣಿಯಲ್ಲಿದ್ದವು. ಆದರೆ ಸಿದ್ದರಾಮಯ್ಯ ಅದ್ಹ್ಯಾಗೋ ಹೈ ಕಮಾಂಡ್ ಮನವೊಲಿಸಿ ಸಿಎಂ ಕುರ್ಚಿಯಲ್ಲಿ ಕುಳಿತುಬಿಟ್ಟರು! ಭ್ರಮನಿರಸನಗೊಂಡಿದ್ದ ಪರಮೇಶ್ವರ್ ಸಾರ್ವಜನಿಕವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು

ತುಮಕೂರು: ಅದೊಂದು ಕಾಲವಿತ್ತು, ಸಿದ್ದರಾಮಯ್ಯ (Siddaramaiah) ಮತ್ತು ಜಿ ಪರಮೇಶ್ವರ (G Parameshwara) ಅವರ ನಡುವೆ ಎಲ್ಲವೂ ಸರಿಯಿಲ್ಲ ಅಂತ ರಾಜಕೀಯ ಮತ್ತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದ ಕಾಲ. ಅದು ಸಹಜವೂ ಆಗಿತ್ತು. ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಸಿದ್ದರಾಮಯ್ಯರನ್ನು ಈಗಲೂ ಸಿದ್ದರಾಮಯ್ಯರನ್ನು ಔಟ್ ಸೈಡರ್ (outsider) ಅಂತಲೇ ಪರಿಗಣಿಸುತ್ತಾರೆ. 2013 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ನಿಸ್ಸಂದೇಹವಾಗಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಆದರೆ, ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಕೇಳಿ ಬಂದ ಕಾರಣ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ ಹೆಸರುಗಳು ಆ ಉನ್ನತ ಸ್ಥಾನಕ್ಕಾಗಿ ಮುಂಚೂಣಿಯಲ್ಲಿದ್ದವು. ಆದರೆ ಸಿದ್ದರಾಮಯ್ಯ ಅದ್ಹ್ಯಾಗೋ ಹೈ ಕಮಾಂಡ್ ಮನವೊಲಿಸಿ ಸಿಎಂ ಕುರ್ಚಿಯಲ್ಲಿ ಕುಳಿತುಬಿಟ್ಟರು! ಭ್ರಮನಿರಸನಗೊಂಡಿದ್ದ ಪರಮೇಶ್ವರ್ ಸಾರ್ವಜನಿಕವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. 2023 ರ ವಿಧಾನ ಸಭೆ ಚುನಾವಣೆ ನಂತರವೂ ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆ ರೇಸ್ ನಲ್ಲಿ ತಾನೂ ಇರುವುದಾಗಿ ಹೇಳಿದ್ದರು. ಆದರೆ ದೆಹಲಿಯಲ್ಲಿ ನಡೆದ ಕತೆ ಕನ್ನಡಿಗರಿಗೆ ಗೊತ್ತಿದೆ ಈ ಕಹಿಯನ್ನೂ ಪರಮೇಶ್ವರ್ ಮರೆತಂತಿದೆ. ಮಧುಗಿರಿಯಲ್ಲಿ ಕ್ಷೀರಭಾಗ್ಯದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರ ಮತ್ತು ಸಿದ್ದರಾಮಯ್ಯ ನಡುವಿನ ಬಾಂಧವ್ಯ ಮತ್ತು ಆತ್ಮೀಯತೆ ಕಂಡು ಇದೆಲ್ಲ ನೆನಪಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ