AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಅವಾಂತರ; ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಆರೋಗ್ಯ ಇಲಾಖೆ ಸಿಬ್ಬಂದಿ

ಮಳೆ ಅವಾಂತರ; ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಆರೋಗ್ಯ ಇಲಾಖೆ ಸಿಬ್ಬಂದಿ

ಮಾಲಾಶ್ರೀ ಅಂಚನ್​
|

Updated on: Sep 17, 2025 | 12:53 PM

Share

ಉತ್ತರ ಕರ್ನಾಟಕದಲ್ಲಿ ವರುಣನ ಅಬ್ಬರಕ್ಕೆ ಅವಾಂತರಗಳೇ ನಡೆದಿವೆ. ಇನ್ನೂ ಈ ಭಾರಿ ಮಳೆಗೆ ಭಾರಿ ಮಳೆಗೆ ಹಳ್ಳದ ನೀರಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೊಚ್ಚಿ ಹೋದ ಘಟನೆ ಗದಗದ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಮಂಗಳವಾರ (ಸೆ.16) ನಡೆದಿದೆ. ನೀರಲ್ಲಿ ಕೊಚ್ಚಿ ಹೋದ ಮಹಿಳಾ ಸಿಬ್ಬಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಗದಗ, ಸೆಪ್ಟೆಂಬರ್‌ 17: ಉತ್ತರ ಕರ್ನಾಟಕದಲ್ಲಿ ವರುಣನ (Heavy Rain) ಅಬ್ಬರಕ್ಕೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಇನ್ನು ಈ ರಣ ಮಳೆ ಅವಾಂತರದಿಂದ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋದಂತಹ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಮಂಗಳವಾರ (ಸೆ.16) ನಡೆದಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಬಸಮ್ಮ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ. ಆರೋಗ್ಯ ಶಿಬಿರ ಮುಗಿಸಿ ಬೈಕ್‌ನಲ್ಲಿ ವಾಪಸ್‌ ಬರುತ್ತಿದ್ದ ವೇಳೆ ನೀರಿನ ರಬ್ಬಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಮೂರು ಜನ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದರಲ್ಲಿ ಇಬ್ಬರು ಜಾಲಿ ಗಿಡದಲ್ಲಿ ಸಿಲುಕಿ ಬಚಾವ್‌ ಆಗಿದ್ದಾರೆ. ಕೊಚ್ಚಿ ಹೋದ  ಮಹಿಳಾ ಸಿಬ್ಬಂದಿಗಾಗಿ  ಶೋಧ ಕಾರ್ಯ ಮುಂದುವರಿದಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ