AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಮುಸುಕುಧಾರಿ ಗ್ಯಾಂಗ್ ಹಾವಳಿ, 20 ಸೆಕೆಂಡ್​ಗಳಲ್ಲಿ ಅಂಗಡಿ ಬಾಗಿಲು ಮುರಿದು ಕಳ್ಳತನ

ಗದಗ: ಮುಸುಕುಧಾರಿ ಗ್ಯಾಂಗ್ ಹಾವಳಿ, 20 ಸೆಕೆಂಡ್​ಗಳಲ್ಲಿ ಅಂಗಡಿ ಬಾಗಿಲು ಮುರಿದು ಕಳ್ಳತನ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Feb 18, 2025 | 8:33 AM

Share

ಫೆಬ್ರವರಿ 16ರ ಮಧ್ಯರಾತ್ರಿ ಮುಸುಕುಧಾರಿ ಗ್ಯಾಂಗ್ ಗದಗ-ಬೆಟಗೇರಿ ಅವಳಿ ನಗರಗಳ 8 ಅಂಗಡಿಗಳಿಗೆ ಕನ್ನ ಹಾಕಿದೆ. 6 ಕಳ್ಳರ ಗ್ಯಾಂಗ್​ ಇದಾಗಿದೆ. ಪೊಲೀಸ್​​ ಸೆಕ್ಯೂರಿಟಿ ಇದ್ದರೂ ಕೃತ್ಯವೆಸಗಿದೆ. ಬಡಾವಣೆ ಠಾಣೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ರಾತ್ರಿ ರೌಂಡ್ಸ್ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಗದಗ, ಫೆಬ್ರವರಿ 18: ಗದಗ ಜಿಲ್ಲೆಗೂ ಖತರ್ನಾಕ್​​ ಮುಸುಕುಧಾರಿ ಗ್ಯಾಂಗ್​ ಎಂಟ್ರಿ ಕೊಟ್ಟಿದ್ದು, ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದೇ ರಾತ್ರಿ ಸರಣಿ ಕಳ್ಳತನ ನಡೆದಿದೆ. ಅಂಗಡಿ ಶಟರ್​​ ಮುರಿದು ಅಂಗಡಿಗಳಲ್ಲಿದ್ದ 25 ಸಾವಿರ ರೂಪಾಯಿ ಹಣ ದೋಚಿ ಗ್ಯಾಂಗ್ ಪರಾರಿಯಾಗಿದೆ. ಗದಗ-ಬೆಟಗೇರಿ ಅವಳಿ ನಗರದ ಹಾತಲಗೇರಿ, ಕೆ.ಸಿ.ರಾಣಿ ರೋಡ್​​​​​, ಹಾಳಕೇರಿ‌ ಮಠದ ಬಳಿ ಹಲವು ಕಿರಾಣಿ ಅಂಗಡಿಗಳಲ್ಲಿ ಕಳ್ಳತನ ಮಾಡಲಾಗಿದೆ. ಪೊಲೀಸರ ವೈಫಲ್ಯವೇ ಸರಣಿ‌ ಕಳ್ಳತನಕ್ಕೆ ಕಾರಣ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸುಕುಧಾರಿ ಗ್ಯಾಂಗ್​ ಕಳ್ಳತನದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sanjeev Pandre
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More