‘ಫ್ಯಾನ್ಸ್​ಗೆ ಸೆಲ್ಫಿ ಕೊಡಲು ಕಾರು ತಿರುಗಿಸಿಕೊಂಡು ವಾಪಸ್​ ಬಂದಿದ್ದರು ಪುನೀತ್​’: ಆ ಘಟನೆ ನೆನೆದ ಹರ್ಷ

| Updated By: ಮದನ್​ ಕುಮಾರ್​

Updated on: Mar 07, 2022 | 4:21 PM

‘ಜೇಮ್ಸ್​’ ಶೂಟಿಂಗ್​ ಸಂದರ್ಭದಲ್ಲಿ ಆದ ಒಂದು ಘಟನೆಯನ್ನು ಹರ್ಷ ಈಗ ನೆನಪು ಮಾಡಿಕೊಂಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಬಗ್ಗೆ ಮಾತನಾಡಿ ಅವರು ಭಾವುಕರಾಗಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಲೆಕ್ಕವಿಲ್ಲದಷ್ಟು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞ ಹಾಗೂ ಕಲಾವಿದರ ಎದೆಯಲ್ಲಿ ಹಲವು ನೆನಪುಗಳು ಹಸಿರಾಗಿವೆ. ಅವುಗಳ ಬಗ್ಗೆ ಎಷ್ಟು ಮಾತನಾಡಿದರೂ ಮುಗಿಯದು. ಮಾ.17ರಂದು ‘ಜೇಮ್ಸ್​’ ಸಿನಿಮಾ (James Movie) ಬಿಡುಗಡೆ ಆಗಲಿದೆ. ಅದು ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೇ ಸಿನಿಮಾ. ಆ ಚಿತ್ರದಲ್ಲಿ ಅಪ್ಪು ಜೊತೆ ‘ಗಜಪಡೆ’ ಹರ್ಷ (Gajapade Harsha) ಕೂಡ ಅಭಿನಯಿಸಿದ್ದಾರೆ. ‘ಜೇಮ್ಸ್​’ ಶೂಟಿಂಗ್​ ಸಂದರ್ಭದಲ್ಲಿ ಆದ ಒಂದು ಘಟನೆಯನ್ನು ಹರ್ಷ ಈಗ ನೆನಪು ಮಾಡಿಕೊಂಡಿದ್ದಾರೆ. ಪುನೀತ್​ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಹರ್ಷ ಅವರ ಬಾಲ್ಯದ ಸ್ನೇಹಿತರು ‘ಜೇಮ್ಸ್​’ ಚಿತ್ರೀಕರಣದ ಸ್ಥಳಕ್ಕೆ ಬಂದಿದ್ದರು. ಆದರೆ ಅಂದು ಶೂಟಿಂಗ್​ ಮುಗಿಸಿಕೊಂಡು ಅಪ್ಪು ಬೇಗ ಹೊರಟು ಹೋದರು. ಅಭಿಮಾನಿಗಳು ಕಾಯುತ್ತಿದ್ದಾರೆ ಎಂಬ ವಿಷಯವನ್ನು ಫೋನ್​ ಮೂಲಕ ಅವರಿಗೆ ಹರ್ಷ ಹೇಳಿದಾಗ ಮತ್ತೆ ಕಾರು ತಿರುಗಿಸಿಕೊಂಡು ಚಿತ್ರೀಕರಣದ ಸ್ಥಳಕ್ಕೆ ವಾಪಸ್​ ಬಂದಿದ್ದರು. ಅದನ್ನು ನೆನೆದು ಹರ್ಷ ಭಾವುಕರಾಗಿದ್ದಾರೆ.

ಇದನ್ನೂ ಓದಿ:

‘ಪುನೀತ್​ ರೀತಿ ನಾವು ಸ್ಟಂಟ್​ ಮಾಡೋದಿಲ್ಲ’; ನಿಜ ಒಪ್ಪಿಕೊಂಡಿದ್ದ ಅಲ್ಲು ಅರ್ಜುನ್​, ಜ್ಯೂ. ಎನ್​ಟಿಆರ್​

‘ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು’: ‘ಜೇಮ್ಸ್​’ ಬಗ್ಗೆ ಚಿಕ್ಕಣ್ಣ ನೋವಿನ ನುಡಿ