ಈ ವರ್ಷ ತುಂಬಾ ಅನಾಹುತಗಳು ಸಂಭವಿಸಲಿವೆ: ಗಣಪತಿ ಸಚ್ಚಿದಾನಂದ ಶ್ರೀ ಸ್ಫೋಟಕ ಭವಿಷ್ಯ
ಇಂದು (ಫೆಬ್ರವರಿ 26) ಮಹಾಶಿವರಾತ್ರಿ ಹಬ್ಬದ ಸಂಭ್ರಮದ ವಾತಾವರಣ ಮನೆ ಮಾಡಿದೆ. ಬೆಳಿಗ್ಗೆಯಿಂದಲೇ ಎಲ್ಲ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲೆಡೆ ಮಂತ್ರಘೋಷಗಳು ಕೇಳಿ ಬರುತ್ತಿದೆ. ಅದರಂತೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜೆಗಳು ನಡೆದವು. ಈ ವೇಳೆ ಗಣಪತಿ ಸಚ್ಚಿದಾನಂದ ಶ್ರೀ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮೈಸೂರು (ಫೆಬ್ರವರಿ 26): ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜೆಗಳು ನಡೆದವು. ಈ ವೇಳೆ ಗಣಪತಿ ಸಚ್ಚಿದಾನಂದ ಶ್ರೀ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ವರ್ಷ ಹರಿ ಮತ್ತು ಶಿವ ಇಬ್ಬರ ಕೃಪೆಗೆ ಪ್ರಾರ್ಥಿಸಬೇಕು. ಇಲ್ಲ ತುಂಬಾ ಅನಾಹುತಗಳು ಸಂಭವಿಸಲಿವೆ. ಪ್ರಾಕೃತಿಕ ಪ್ರಳಯಗಳು, ಯುದ್ಧಗಳು ಎಲ್ಲವೂ ಸಂಭವಿಸಲಿವೆ. ಮಹಾಕುಂಭ ಬಂದಿರುವುದು ಜಗತ್ತಿಗೆ ಶುಭ ಸಂದೇಶ. ಮಾಘಮಾಸದಲ್ಲಿ ಪುಣ್ಯಸ್ನಾನ ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ತಿಳಿಸುತ್ತಿದೆ. ಎಲ್ಲರಿಗೂ ಧರ್ಮ ಶ್ರದ್ದೆ ಅನ್ನೋದು ಈ ವರ್ಷ ಗೊತ್ತಾಗುತ್ತಿದೆ. ಇದಕ್ಕೆ ಸಾಕ್ಷಿ ಕುಂಭಮೇಳದಲ್ಲಿ ಸಿಗುತ್ತದೆ ಎಂದರು.
ಇವತ್ತು ಎಲ್ಲಿ ನೋಡಿದರು ಯುವಕರು ಆಧ್ಯಾತ್ಮಿಕ ಜೀವನ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಧಾರ್ಮಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಕೆಲಸವನ್ನ ಯುವ ಪೀಳಿಗೆ ಮಾಡುತ್ತಿದೆ. ಭಾರತ ದೇಶ ಎಲ್ಲಾ ದೇಶಗಳಿಗೂ ಮಿತ್ರ/ ಭಾರತದ ಎಲ್ಲಾ ಪ್ರಜೆಗಳು ಎಲ್ಲರಿಗೂ ಒಳ್ಳೆದಾಗಲಿ ಎಂದು ಬೇಡಿಕೊಳ್ಳುತ್ತಾರೆ. ನಾವೆಲ್ಲರೂ ಮತ್ತೆ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಇದಕ್ಕೆ ಭಕ್ತಿ ಕಡಿಮೆ ಆಗಿದೆ ಅಂತಲ್ಲ ಭಕ್ತಿ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ನಾವು ವರ್ತಿಸಬೇಕಿದೆ. ಈ ವರ್ಷ ತುಂಬಾ ಅನಾಹುತ ಅಶುಭಗಳಾಗಲಿವೆ ಎಂದು ಆಘಾತಕಾರಿ ಭವಿಷ್ಯ ನುಡಿದರು.
ಪ್ರಜಾಪ್ರತಿನಿದಿಗಳು ಕೂಡ ದೈವಿಕ ಭಾವನೆ ದೈವಿಕ ಸಂಪತ್ತನ್ನ ಹೊಂದಿರಬೇಕು. ದೈವಿಕ ವಿಚಾರಗಳಿಗೆ ನೋವುಂಟಾಗದ ರೀತಿ ನೋಡಿಕೊಳ್ಳಬೇಕು. ಎಲ್ಲಾ ಶ್ರದ್ದೆ ಉಪಾಸನಗಳು ಒಂದೇ ಅನ್ನುವ ಭಾವನೆ ಬರಬೇಕು. ಸಾಧು ಸಂತರು ಕೂಡ ನಮ್ಮನ್ನ ಹರಸಿದ್ದಾರೆ. ಎಷ್ಟು ಹರಸಿದರು ಉಪಾಸನ ಮಾಡಿದರು ಸಾಲದು. ಈ ಬಗ್ಗೆ ನಾನೇನು ಭವಿಷ್ಯ ಹೇಳುತ್ತಿಲ್ಲ. ಇತ್ತೀಚಿನ ಅತೃಪ್ತಿ ಭಾವನೆಗಳು ಬಂದಿವೆ ಅವು ಹೋಗಬೇಕು ಎಂದು ಹೇಳಿದರು.