Ganesh Chaturthi 2022: ಕೋಲಾರದಲ್ಲಿ ಉಚಿತ ಗಣೇಶನ ಮೂರ್ತಿ, ಸಾವರ್ಕರ್ ಫೋಟೋ ವಿತರಣೆ: ಮುಗಿಬಿದ್ದ ಜನ

| Updated By: ಆಯೇಷಾ ಬಾನು

Updated on: Aug 28, 2022 | 10:54 PM

ಕೋಲಾರ ಜಿಲ್ಲೆ ಮಾಲೂರು ಬಿಜೆಪಿ ಕಚೇರಿ ಬಳಿ ಉಚಿತ ಗಣೇಶನ ಮೂರ್ತಿ ನೀಡಲಾಗಿದ್ದು ಜನ ಮುಗಿಬಿದ್ದ ಘಟನೆ ನಡೆದಿದೆ.

ಕೋಲಾರ ಜಿಲ್ಲೆ ಮಾಲೂರು ಬಿಜೆಪಿ ಕಚೇರಿ ಬಳಿ ಉಚಿತ ಗಣೇಶನ ಮೂರ್ತಿ ನೀಡಲಾಗುತ್ತಿದ್ದು ಫ್ರೀ ಗಣೇಶನನ್ನು ಪಡೆಯಲು ಜನರು ಮುಗಿಬಿದ್ದ ಘಟನೆ ನಡೆದಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಉಚಿತವಾಗಿ ಗಣೇಶನ ಮೂರ್ತಿ ವಿತರಣೆ ಮಾಡಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ 1000ಕ್ಕೂ ಹೆಚ್ಚು ಮೂರ್ತಿಗಳನ್ನು ವಿತರಣೆ ಮಾಡಿದ್ದಾರೆ. ಇನ್ನು ಗಣೇಶನ ಮೂರ್ತಿ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಾವರ್ಕರ್ ಫೋಟೋ ವಿತರಣೆ ಮಾಡಿದ್ದಾರೆ. ಗಣೇಶನ ಮೂರ್ತಿ ಪಡೆಯಲು ಸುಮಾರು 2 ಸಾವಿರ ಯುವಕರು ಭಾಗಿಯಾಗಿದ್ದರು.

Published on: Aug 28, 2022 10:47 PM