ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇಶ್

|

Updated on: Aug 24, 2023 | 11:27 PM

Harshika-Bhuvan Wedding: ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ವಿವಾಹಕ್ಕೆ ಹಲವು ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಆಗಮಿಸಿದ್ದರು, ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಹ ಒಬ್ಬರು. ನವ ಜೋಡಿಗೆ ದುಬಾರಿ ಉಡುಗೊರೆಯನ್ನು ಗಣೇಶ್ ನೀಡಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್ ಪೊನ್ನಣ್ಣ (Bhuvan Ponnanna) ಇಂದು (ಆಗಸ್ಟ್ 24) ಕೊಡಗಿನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಈ ಜೋಡಿಯ ವಿವಾಹಕ್ಕೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ. ಅದರಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಸಹ ಒಬ್ಬರು. ನೂತನ ಜೋಡಿಗೆ ಚಿನ್ನದ ನೆಕ್​ಲೆಸ್ ಅನ್ನು ಗಣೇಶ್ ಉಡುಗೊರೆಯಾಗಿ ನೀಡಿ ಶುಭ ಹಾರೈಸಿದ್ದಾರೆ. ಬಳಿಕ ಮಾತನಾಡಿ, ಒಳ್ಳೆಯ ಗೆಳೆಯರಾಗಿದ್ದರು, ಇನ್ನು ಮುಂದೆ ಒಳ್ಳೆಯ ದಂಪತಿಗಳಾಗಿ ಇರಲಿದ್ದಾರೆ ಎಂದ ಹಾರೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ