ಭುವನ್ ಪೊನ್ನಣ್ಣ-ಹರ್ಷಿಕಾ ಪೂಣಚ್ಚ ಈಗ ಪತಿ-ಪತ್ನಿ; ನವ ದಂಪತಿಗೆ ಶುಭಾಶಯಗಳ ಸುರಿಮಳೆ

ಭುವನ್ ಹಾಗೂ ಹರ್ಷಿಕಾ ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಈ ವಿಚಾರವನ್ನು ಗುಟ್ಟಾಗಿ ಇಡಲಾಗಿತ್ತು. ದಶಕಗಳ ಪ್ರೀತಿಗೆ ಈ ಜೋಡಿ ಹೊಸ ಅರ್ಥ ನೀಡಿದೆ. ಇಬ್ಬರಿಗೂ ಹುಟ್ಟೂರಿನಲ್ಲೇ ಮದುವೆ ಆಗಬೇಕು ಎನ್ನುವ ಆಸೆ ಇತ್ತು. ಹೀಗಾಗಿ, ವಿರಾಜಪೇಟೆಯಲ್ಲಿ ಇವರು ಮದುವೆ ಆಗಿದ್ದಾರೆ.

ಭುವನ್ ಪೊನ್ನಣ್ಣ-ಹರ್ಷಿಕಾ ಪೂಣಚ್ಚ ಈಗ ಪತಿ-ಪತ್ನಿ; ನವ ದಂಪತಿಗೆ ಶುಭಾಶಯಗಳ ಸುರಿಮಳೆ
ಭುವನ್-ಹರ್ಷಿಕಾ
Follow us
ರಾಜೇಶ್ ದುಗ್ಗುಮನೆ
|

Updated on: Aug 24, 2023 | 2:16 PM

ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ (Harshika Poonachcha) ಅವರ ವಿವಾಹ ಕಾರ್ಯ ಇಂದು (ಆಗಸ್ಟ್ 24) ನೆರವೇರಿದೆ. ಕೊಡಗಿನ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಗಳು ನಡೆದಿವೆ. ಕುಟುಂಬದವರು, ಆಪ್ತರು ಹಾಗೂ ಚಿತ್ರರಂಗದ ಅನೇಕರು ಮದುವೆಯಲ್ಲಿ ಭಾಗಿ ಈ ನವ ದಂಪತಿಗೆ ಶುಭಾಶಯ ಕೋರಿದ್ದಾರೆ. ಬುಧವಾರದಿಂದಲೇ (ಆಗಸ್ಟ್ 23) ಮದುವೆ ಕಾರ್ಯಗಳು ಆರಂಭ ಆಗಿದ್ದವು. ಇಂದಿಗೆ ಮದುವೆ ಸಮಾರಂಭ ಪೂರ್ಣಗೊಂಡಿದೆ. ನವದಂಪತಿಗೆ ಶುಭಾಶಯ ತಿಳಿಸಲಾಗುತ್ತಿದೆ.

ಭುವನ್ ಹಾಗೂ ಹರ್ಷಿಕಾ ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಈ ವಿಚಾರವನ್ನು ಗುಟ್ಟಾಗಿ ಇಡಲಾಗಿತ್ತು. ದಶಕಗಳ ಪ್ರೀತಿಗೆ ಈ ಜೋಡಿ ಹೊಸ ಅರ್ಥ ನೀಡಿದೆ. ಇಬ್ಬರಿಗೂ ಹುಟ್ಟೂರಿನಲ್ಲೇ ಮದುವೆ ಆಗಬೇಕು ಎನ್ನುವ ಆಸೆ ಇತ್ತು. ಹೀಗಾಗಿ, ವಿರಾಜಪೇಟೆಯಲ್ಲಿ ಇವರು ಮದುವೆ ಆಗಿದ್ದಾರೆ. ಕೊಡವ ಸಮುದಾಯದಲ್ಲಿ ಆರತಕ್ಷತೆ ಸಂಪ್ರದಾಯ ಇಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಯಾವುದೇ ರಿಸೆಪ್ಷನ್ ಇರುವುದಿಲ್ಲ.

ಮೊದಲ ದಿನ ಊರು ಕೂಡುವ ಶಾಸ್ತ್ರ ಇರುತ್ತದೆ. ಆ ದಿವನೇ ಹರ್ಷಿಕಾಗೆ ತಾಯಿಯಿಂದ ಮಾಂಗಲ್ಯಧಾರಣೆ ನಡೆಯುತ್ತದೆ. ಆ ನಂತರ ಹುಡುಗ-ಹುಡುಗಿ ಪರಸ್ಪರ ನೋಡಿಕೊಳ್ಳುವಂತಿಲ್ಲ. ಇಬ್ಬರಿಗೂ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ ನಡೆಯುತ್ತದೆ. ಇವಿಷ್ಟು ಮೊದಲ ದಿನದ ಶಾಸ್ತ್ರಗಳು. ಇನ್ನು ಎರಡನೇ ದಿನ ಬೆಳಿಗ್ಗೆ ಬಳೆ ಶಾಸ್ತ್ರ, ಬಾಳೆ ಮರ ಕಡಿಯುವ ಶಾಸ್ತ್ರ ಸೇರಿ ಹಲವು ಶಾಸ್ತ್ರಗಳು ನಡೆಯುತ್ತದೆ.

ಮದುವೆಗೆ ಆಗಮಿಸಿದ ಅತಿಥಿಗಳಿಗೆ ಭರ್ಜರಿಯಾಗಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾಂಸಾಹಾರ ಹಾಗೂ ಸಸ್ಯಾಹಾರ ಎರಡೂ ವ್ಯವಸ್ಥೆ ಇದೆ. ಕೊಡವ ಶೈಲಿಯ ನೂಪಟ್ಟು, ಪೋರ್ಕ್​ ಫ್ರೈ, ಪೋರ್ಕ್​ ಕರಿ, ಮಟನ್ ಬಿರಿಯಾನಿ, ಮಟನ್ ಫ್ರೈ, ಚಿಕನ್ ಫ್ರೈ ಮೊದಲಾದ ಖಾದ್ಯಗಳಿವೆ. ಸಸ್ಯಾಹಾರ ಮೆನುದಲ್ಲಿ ಪಲಾವ್, ಬೆಂಡೇಕಾಯಿ ಫ್ರೈ, ಅನಾನಸ್ ಕರಿ, ಈರುಳ್ಳ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾ ಮೊದಲಾದವು ಇವೆ.

ಇದನ್ನೂ ಓದಿ: ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ ಮದುವೆ ಸಂಭ್ರಮ; ಕೊಡವ ಶೈಲಿಯಲ್ಲಿ ವಿವಾಹ

ಮದುವೆಗೆ ಚಿತ್ರರಂಗದ ಅನೇಕರು ಆಗಮಿಸಿದ್ದರು. ಹಿರಿಯ ನಟ ದೊಡ್ಡಣ್ಣ, ಅನುಪ್ರಭಾಕರ್, ರಘು ಮುಖರ್ಜಿ ಸೇರಿ ಅನೇಕರು ಹಾಜರಿ ಹಾಕಿದ್ದರು. ನವದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಬರುತ್ತಿವೆ. ನೂರುಕಾಲ ದಂಪತಿ ಸುಖವಾಗಿ ಬಾಳಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್