Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ ಮದುವೆ ಸಂಭ್ರಮ; ಕೊಡವ ಶೈಲಿಯಲ್ಲಿ ವಿವಾಹ

ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ಅವರ ವಿವಾಹ ಕಾರ್ಯ ನಡೆಯುತ್ತಿದೆ. ಮದುವೆ ಶಾಸ್ತ್ರಗಳು ಬುಧವಾರದಿಂದಲೇ (ಆಗಸ್ಟ್​ 23) ಆರಂಭ ಆಗಿವೆ. ಇಂದು (ಆಗಸ್ಟ್​ 24) ಇವರಿಬ್ಬರು ಹಸೆಮಣೆ ಏರುತ್ತಿದ್ದಾರೆ. ಮದುವೆ ಸಲುವಾಗಿ ಅವರು ಬ್ರೇಕ್​ ಪಡೆದುಕೊಂಡಿದ್ದಾರೆ.

ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ ಮದುವೆ ಸಂಭ್ರಮ; ಕೊಡವ ಶೈಲಿಯಲ್ಲಿ ವಿವಾಹ
ಭುವನ್​ ಪೊನ್ನಣ್ಣ. ಹರ್ಷಿಕಾ ಪೂಣಚ್ಚ
Follow us
ಮದನ್​ ಕುಮಾರ್​
|

Updated on: Aug 24, 2023 | 11:04 AM

ಕನ್ನಡ ಚಿತ್ರರಂಗದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ (​Harshika Poonacha) ಅವರು ಬಹುಕಾಲದ ಗೆಳೆಯ ಭುವನ್​ ಪೊನ್ನಣ್ಣ (​Bhuvan Ponnanna) ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರೂ ಕೊಡಗಿನವರು. ಹಾಗಾಗಿ ಕೊಡವ ಸಂಪ್ರದಾಯದ ಪ್ರಕಾರ ಮದುವೆ ನೆರವೇರುತ್ತಿದೆ. ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ವಿವಾಹ ಕಾರ್ಯ (Harshika Poonacha Marriage) ನಡೆಯುತ್ತಿದೆ. ಭುವನ್​ ಪೊನ್ನಣ್ಣ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮದುವೆ ಸಲುವಾಗಿ ಅವರೀಗ ಬ್ರೇಕ್​ ಪಡೆದುಕೊಂಡಿದ್ದಾರೆ. ಹರ್ಷಿಕಾ-ಭುವನ್​ ಮದುವೆ ಶಾಸ್ತ್ರಗಳು ಬುಧವಾರದಿಂದಲೇ (ಆಗಸ್ಟ್​ 23) ಆರಂಭ ಆಗಿವೆ. ಇಂದು (ಆಗಸ್ಟ್​ 24) ಇವರಿಬ್ಬರು ಹಸೆಮಣೆ ಏರಲಿದ್ದಾರೆ. ಚಿತ್ರರಂಗದ ಅನೇಕ ಗಣ್ಯರು ಕೊಡಗಿಗೆ ತೆರಳಿ ಈ ಸೆಲೆಬ್ರಿಟಿ ವಿವಾಹದಲ್ಲಿ ಭಾಗಿ ಆಗಿದ್ದಾರೆ.

2012ರಿಂದಲೂ ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ಅವರು ಪ್ರೀತಿಸುತ್ತಿದ್ದರು. ಆದರೆ ತಮ್ಮ ಪ್ರೀತಿಯ ಬಗ್ಗೆ ಅವರು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ. ಇತ್ತೀಚೆಗೆ ಅವರ ಮದುವೆ ಆಮಂತ್ರಣ ಪತ್ರಿಕೆ ವೈರಲ್​ ಆದ ಬಳಿಕ ಎಲ್ಲರಿಗೂ ವಿಷಯ ತಿಳಿಯಿತು. ಇವರ ಪ್ರೀತಿಗೆ ಎರಡೂ ಕುಟುಂಬದವರ ಒಪ್ಪಿಗೆ ಸಿಕ್ಕಿದೆ. ಮದುವೆಗೂ ಮುನ್ನ ಭುವನ್​ ಅವರು ಹೊಸ ಮನೆ ಕಟ್ಟಿಸಿದ್ದಾರೆ. ಅದರ ಗೃಹ ಪ್ರವೇಶ ಇತ್ತೀಚೆಗಷ್ಟೇ ನೆರವೇರಿತು.

ಇದನ್ನೂ ಓದಿ: ಮದುವೆಗೆ ಕರೆಯಲು ಹೋದ ಹರ್ಷಿಕಾ ಪೂಣಚ್ಚಗೆ ಉಡುಗೊರೆಯಾಗಿ ಚಿನ್ನ ಕೊಟ್ಟ ಹಿರಿಯ ನಟಿ

ಹಸೆಮಣೆ ಏರಲು ಸಜ್ಜಾಗಿರುವ ಭುವನ್​ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಮದುವೆಯ ಸಂಭ್ರಮ ಜೋರಾಗಿಯೇ ಇದೆ. ಇಲ್ಲಿಯವರೆಗೂ ಇದು ನನ್ನ ಮದುವೆ ಎಂಬ ನಂಬಿಕೆ ನನಗೆ ಇರಲಿಲ್ಲ. ಈಗ ಸಂಭ್ರಮ ಮತ್ತು ಜನರ ಪ್ರೀತಿ-ಆಶೀರ್ವಾದ ನೋಡಿದಾಗ ನನಗೆ ಖುಷಿ ಆಗುತ್ತಿದೆ. ನನಗಿಂತಲೂ ಹೆಚ್ಚಾಗಿ ಜನರಿಗೆ ಈ ಮದುವೆ ಬಗ್ಗೆ ಖುಷಿ ಇದೆ. ಕೌಟುಂಬಿಕ ಜೀವನಕ್ಕೆ ನಾನು ಕಾಲಿಡುತ್ತಿದ್ದೇನೆ ನಿಜ. ಮನಸ್ಸಿನಲ್ಲಿ ನಾನು ಯಾವಾಗಲೂ ಬ್ಯಾಚುಲರ್​. ಗೆಳತಿಯನ್ನೇ ಮದುವೆ ಆಗುತ್ತಿರುವುದರಿಂದ ನನಗೆ ಮದುವೆ ಬಳಿಕ ಹೆಚ್ಚೇನೂ ವ್ಯತ್ಯಾಸ ಆಗುವುದಿಲ್ಲ. ಹೆಚ್ಚು ವ್ಯತ್ಯಾಸ ಇರಲೂಬಾರದು. ನನ್ನ ಕುಟುಂಬದವರೇ ಈ ಮದುವೆ ವಿಶೇಷ ಅತಿಥಿಗಳು’ ಎಂದು ಭುವನ್​ ಪೊನ್ನಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಶುರುವಾಯ್ತು ಹರ್ಷಿಕಾ-ಭುವನ್ ಮದುವೆ ಸಂಭ್ರಮ: ಇಲ್ಲಿವೆ ಚಿತ್ರಗಳು

ಹರ್ಷಿಕಾ ಪೂಣಚ್ಚ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಾಗಾಗಿ ಬಣ್ಣದ ಲೋಕದಲ್ಲಿ ಅವರ ಸ್ನೇಹಿತರ ಬಳಗ ದೊಡ್ಡದು. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೊಡಗಿಗೆ ತೆರಳಿದ್ದಾರೆ. ಅಪ್ಪಟ ಕೊಡವ ಸಂಪ್ರದಾಯದ ಪ್ರಕಾರ ನಡೆಯುವ ಮದುವೆಯನ್ನು ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.