ಸಿನಿಮಾ ಸೆಳೆತ ಮೂಡಿದ್ದು ಹೇಗೆ? ವಿತರಕನಾಗಿ ಪಟ್ಟ ಕಷ್ಟಗಳೇನು: ಹಳೆಯ ದಿನಗಳ ನೆನೆದ ಎಚ್​ಡಿಕೆ

HD Kumaraswamy: ಮಾಜಿ ಸಿಎಂ ಕುಮಾರಸ್ವಾಮಿ ಸಕ್ರಿಯ ರಾಜಕೀಯಕ್ಕೆ ಇಳಿಯುವ ಮುಂಚೆ ಚಿತ್ರರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ ಅದಕ್ಕೂ ಮುನ್ನ ಚಿತ್ರಮಂದಿರದ ಮಾಲೀಕನಾಗಿ ಅನುಭವ ಪಡೆದಿದ್ದರು. ತಮ್ಮ ಚಿತ್ರರಂಗದ ದಿನಗಳ ನೆನಪುಗಳನ್ನು ಎಚ್​ಡಿಕೆ ಮೆಲುಕು ಹಾಕಿದ್ದಾರೆ.

ಸಿನಿಮಾ ಸೆಳೆತ ಮೂಡಿದ್ದು ಹೇಗೆ? ವಿತರಕನಾಗಿ ಪಟ್ಟ ಕಷ್ಟಗಳೇನು: ಹಳೆಯ ದಿನಗಳ ನೆನೆದ ಎಚ್​ಡಿಕೆ
ಎಚ್​ಡಿ ಕುಮಾರಸ್ವಾಮಿ
Follow us
ಮಂಜುನಾಥ ಸಿ.
|

Updated on: Aug 23, 2023 | 9:46 PM

ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸಾರ್ವಜನಿಕ ಜೀವನ ಆರಂಭಿಸಿದ್ದು ಸಿನಿಮಾ ರಂಗದ ಮೂಲಕ. ಅವರೇ ಹೇಳಿಕೊಂಡಿರುವಂತೆ ಅಷ್ಟೇನೂ ಓದಿನಲ್ಲಿ ಮುಂದಿರದಿದ್ದ ಕುಮಾರಸ್ವಾಮ ವಿದ್ಯಾಭ್ಯಾಸ ಮುಗಿಯುತ್ತಲೇ ಚಿತ್ರಮಂದಿರ ಪ್ರಾರಂಭಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ನಂತರ ವಿತರಕ, ಯಶಸ್ವಿ ಸಿನಿಮಾ ನಿರ್ಮಾಪಕರೂ ಆದರು. ಇಂದು (ಆಗಸ್ಟ್ 23) ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯ (Nikhil Kumaraswamy) ಹೊಸ ಸಿನಿಮಾದ ಮುಹೂರ್ತದ ಸಮಯದಲ್ಲಿ ಮಾಧ್ಯಮದವರ ಮುಂದೆ ಹಳೆಯ ದಿನಗಳಿಗೆ ವಿಶೇಷವಾಗಿ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ತಾವು ಕಳೆದ ಸಮಯದ ಬಗ್ಗೆ ಎಚ್​ಡಿಕೆ ಮಾತನಾಡಿದರು.

”ನಾನು ಚಿತ್ರಮಂದಿರ ಪ್ರಾರಂಭಿಸಿದಾಗ ಚಿತ್ರಮಂದಿರ ನಡೆಸುವುದು ಸುಲಭವಾಗಿರಲಿಲ್ಲ. 50-60 ರೂಪಾಯಿಗೆ ಸಿನಿಮಾ ತೋರಿಸಬೇಕಿತ್ತು. ಎಲ್ಲ ರೀತಿಯ ಜನರನ್ನು ಸೆಳೆಯಲು ಒಂದೇ ದಿನ ಬೇರೆ-ಬೇರೆ ಭಾಷೆಯ ಮೂರು ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದೆ. ಕನ್ನಡ ಎರಡು ಶೋ, ತಮಿಳು ಒಂದು ಶೋ, ಇಂಗ್ಲೀಷ್ ಸಿನಿಮಾ ಒಂದು ಶೋ ಹಾಕಿ, ಜನರನ್ನು ಯಶಸ್ವಿಯಾಗಿ ನಮ್ಮ ಚಿತ್ರಮಂದಿರಕ್ಕೆ ಸೆಳೆದಿದ್ದೆ. ಆಗೆಲ್ಲ ಬಹಳ ಕಷ್ಟದ ದಿನಗಳು, ಬೆಳಿಗ್ಗೆ ಶೋ ಪ್ರಾರಂಭಿಸಿ, ನಂತರ ಮೈಸೂರಿಗೆ ಹೋಗಿ ವಿತರಕರೊಂದಿಗೆ ಕೆಲಸ ಮುಗಿಸಿ, ಅಲ್ಲಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಹೊಳೆನರಸೀಪುರಕ್ಕೆ ಬಂದು ಆ ದಿನದ ಕಲೆಕ್ಷನ್ ಲೆಕ್ಕ ಪಡೆಯುತ್ತಿದ್ದೆ. ದಿನಕ್ಕೆ 400 ಕಿ.ಮೀ ಓಡಾಡುತ್ತಿದ್ದೆ ಎಂದು ನೆನಪು ಮಾಡಿಕೊಂಡರು.

”ಮರೆಯಲಾಗದ ದಿನಗಳು ಅವು, ಈಗಿನಷ್ಟು ದುಡ್ಡು ಆಗ ಸಿನಿಮಾದಲ್ಲಿ ಇರಲಿಲ್ಲ. ಆದರೆ ಖುಷಿ ಇತ್ತು, ಸಿನಿಮಾ ಬಿಡುಗಡೆ ಮಾಡುವಾಗ ಸಂಭ್ರಮ ಇತ್ತು. ಆ ನಂತರ ಸಿನಿಮಾ ವಿತರಕನಾದೆ. ಸಿನಿಮಾ ವಿತರಕನಾಗಿ ಯಾರೂ ಬಿಡುಗಡೆ ಮಾಡದ ಕೆಲವು ಸಿನಿಮಾಗಳನ್ನು ಸಹ ನಾನು ಬಿಡುಗಡೆ ಮಾಡಿಕೊಟ್ಟೆ. ಮಾತ್ರವಲ್ಲ, ಹಲವರ ವಿರೋಧದ ನಡುವೆಯೂ ಸಿನಿಮಾ ನಿರ್ಮಾಪಕರಿಗೆ ಹೆಚ್ಚಿನ ದುಡ್ಡು ಸಹ ಬರುವಂತೆ ಮಾಡಿದೆ. ವೈಯಕ್ತಿಕ ಲಾಭದ ಆಸೆ ಬಿಟ್ಟು ಕನ್ನಡ ಸಿನಿಮಾಗಳು ಉಳಿಯಬೇಕು ಎಂಬುದು ಆಗ ನನ್ನ ಉದ್ದೇಶವಾಗಿತ್ತು” ಎಂದರು.

ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿಗಾಗಿ ಬೆಂಗಳೂರಿಗೆ ಬಂದ ಲೈಕಾ ಕುಟುಂಬ, ಅದ್ಧೂರಿ ಮುಹೂರ್ತ

”ಹಂಚಿಕೆದಾರನಾದ ಸಮಯದಲ್ಲಿ ಒಂದು ಸಿನಿಮಾ ನಾಲ್ಕು-ಐದು ಲಕ್ಷಕ್ಕೆ ಮೈಸೂರು ಡಿವಿಶನ್​ಗೆ ಸೇಲ್ ಆಗುತ್ತಿತ್ತು. ಮೂರು ಲಕ್ಷದಿಂದ-ನಾಲ್ಕು ಲಕ್ಷ ನಿರ್ಮಾಪಕರಿಗೆ ಸಿಕ್ಕರೆ ಹೆಚ್ಚು. ಐದು ಲಕ್ಷ ಇದ್ದಂಥಹ ಸೇಲ್ ಮೊತ್ತವನ್ನು ಹದಿನಾಲ್ಕು-ಹದಿನೈದು ಲಕ್ಷಕ್ಕೆ ಏರಿಕೆ ಮಾಡಿದ್ದೆ. ಅಂಬರೀಶ್ ಅವರ ‘ಒಂಟಿ ಸಲಗ’ ಸಿನಿಮಾ ತಯಾರಾಗಿತ್ತು ಆದರೆ ಬಿಡುಗಡೆ ಮಾಡಲು ನಿರ್ಮಾಪಕರಿಗೆ ಆಗಿರಲಿಲ್ಲ. ಆ ನಿರ್ಮಾಪಕರಿಗೆ ಹತ್ತು ಲಕ್ಷ ಕೊಟ್ಟು ಆ ಸಿನಿಮಾ ಬಿಡುಗಡೆ ಮಾಡಿದ್ದೆ. ಆಗ ಹಲವರು ನನ್ನ ಟೀಕಿಸಿದರು ಆದರೆ ನಾನು ಪಟ್ಟು ಬಿಟ್ಟಿರಲಿಲ್ಲ. ಹೊಸ ನಿರ್ದೇಶಕರೊಬ್ಬರು ‘ಪಂಚಮವೇದ’ ಹೆಸರಿನ ಸಿನಿಮಾ ಮಾಡಿದ್ದರು ಆ ಸಿನಿಮಾವನ್ನು ಯಾರೂ ಖರೀದಿಸಿರಲಿಲ್ಲ ಆದರೆ ನಾನು ಆ ಸಿನಿಮಾ ಬಿಡುಗಡೆ ಮಾಡಿಸಿದ್ದೆ ಸೂಪರ್ ಹಿಟ್ ಆಯಿತು. ಲೋಕೇಶ್ ನಟನೆಯ ‘ಭುಜಂಗಯ್ಯನ ದಶಾವತಾರ’ ಸೇರಿ ಇನ್ನೂ ಕೆಲವು ಸಿನಿಮಾಗಳನ್ನು ವಿತರಣೆ ಮಾಡಿದ್ದೆ” ಎಂದು ಕುಮಾರಸ್ವಾಮಿ ನೆನಪು ಮಾಡಿಕೊಂಡರು.

ನಾನು ಡಾ ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ, ಅವರಿಂದಲೇ ನನಗೆ ಸಿನಿಮಾ ಮೇಲೆ ಸೆಳೆತ ಬಂತು. ರಾಜ್​ಕುಮಾರ್ ಅವರ ಸಿನಿಮಾಗಳನ್ನು ನೋಡಿ ನಾನು ಸಾಕಷ್ಟು ಕಲಿತೆ, ವ್ಯಕ್ತಿತ್ವ ರೂಪಿಸಿಕೊಂಡೆ. ಸಮಾಜಮುಖಿ ಗುಣಗಳನ್ನು ಮೈಗೂಡಿಸಿಕೊಂಡೆ. ಈಗ ಅನೇಕ ಸಿನಿಮಾಗಳು ಬರುತ್ತಿವೆ, ಒಳ್ಳೆಯ ಹಣ ಮಾಡುತ್ತಿವೆ ಆದರೆ ಸಂದೇಶ ಕೊಡಲಾಗುತ್ತಿಲ್ಲ. ಸಿನಿಮಾಗಳು ಸಮಾಜಮುಖಿ ಆಗಿರಬೇಕು. ಸಿನಿಮಾಗಳು ಸಂಬಂಧಗಳನ್ನು ಕೂಡಿಸುವಂತಿರಬೇಕು. ಈಗಿನ ಹಾಡುಗಳಿಗೂ ಹಳೆಯ ಹಾಡುಗಳಿಗೂ ಹೋಲಿಕೆಯೇ ಸಾಧ್ಯವಿಲ್ಲ” ಎಂದು ಹಳೆಯ ದಿನಗಳ ಕೊಂಡಾಡಿದರು ಕುಮಾರಸ್ವಾಮಿ.

”ಸಿನಿಮಾದವರಿಗೆ ಆಗೆಲ್ಲ ಬಹಳ ಕಷ್ಟ ಇತ್ತು. ರಾಜ್​ಕುಮಾರ್, ವಿಷ್ಣುವರ್ಧನ್ ಅವರುಗಳು ಕೇವಲ 25,000 ಸಂಭಾವನೆ ಪಡೆದು ಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದರು ಅದನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ ಅವರುಗಳು ಹಣಕ್ಕೆ ಆಸೆಪಡುತ್ತಿರಲಿಲ್ಲ ಬದಲಿಗೆ ಒಳ್ಳೆಯ ಸಿನಿಮಾ ಮಾಡಬೇಕು, ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳು ಮಾಡಬೇಕು ಎಂಬುದೇ ಅವರಿಗೆ ಗುರಿ ಆಗಿತ್ತು” ಎಂದು ರಾಜ್ ಕುಮಾರ್, ವಿಷ್ಣುವರ್ಧನ್ ಅವರನ್ನು ಕೊಂಡಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ