ಮದುವೆಗೆ ಕರೆಯಲು ಹೋದ ಹರ್ಷಿಕಾ ಪೂಣಚ್ಚಗೆ ಉಡುಗೊರೆಯಾಗಿ ಚಿನ್ನ ಕೊಟ್ಟ ಹಿರಿಯ ನಟಿ

Harshika-Bhuvan: ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮದುವೆ ಆಗುತ್ತಿದ್ದು, ಚಿತ್ರರಂಗದ ಹಲವು ನಟ-ನಟಿಯರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ಈ ಸಮಯದಲ್ಲಿ ನಟಿ ಜಯಮಾಲಾ, ಹರ್ಷಿಕಾಗೆ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮದುವೆಗೆ ಕರೆಯಲು ಹೋದ ಹರ್ಷಿಕಾ ಪೂಣಚ್ಚಗೆ ಉಡುಗೊರೆಯಾಗಿ ಚಿನ್ನ ಕೊಟ್ಟ ಹಿರಿಯ ನಟಿ
ಹರ್ಷಿಕಾ-ಜಯಮಾಲ
Follow us
ಮಂಜುನಾಥ ಸಿ.
|

Updated on: Aug 20, 2023 | 5:31 PM

ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್ ಪೊನ್ನಣ್ಣ (Bhuvan Ponnanna) ತಮ್ಮ ಬಹುವರ್ಷಗಳ ಪ್ರೇಮಕ್ಕೆ ಮದುವೆಯ ಮುದ್ರೆ ಒತ್ತಲು ತಯಾರಾಗಿದ್ದಾರೆ. ಹರ್ಷಿಕಾ ಮತ್ತು ಭುವನ್ ಪರಸ್ಪರ ವಿವಾಹವಾಗುತ್ತಿದ್ದು ಇದೇ ತಿಂಗಳ 24 ಹಾಗೂ 25ರಂದು ಈ ಯುವಜೋಡಿಯ ವಿವಾಹ ಸಮಾರಂಭ ಕೊಡಗಿನಲ್ಲಿ ಅದ್ಧೂರಿಯಾಗಿ ಜೊತೆಗೆ ಕೊಡವ ಸಂಪ್ರದಾಯದಂತೆ ನಡೆಯಲಿದೆ.

ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಅವರುಗಳು ತಮ್ಮ ಮದುವೆಯ ಆಹ್ವಾನ ಪತ್ರಿಕೆ ವಿತರಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಚಿತ್ರರಂಗದ ಹಲವು ಗಣ್ಯರನ್ನು ತಮ್ಮ ವಿವಾಹಕ್ಕೆ ಹರ್ಷಿಕಾ ಹಾಗೂ ಭುವನ್ ಆಹ್ವಾನಿಸಿದ್ದಾರೆ, ಆಹ್ವಾನಿಸುತ್ತಿದ್ದಾರೆ. ಹಿರಿಯ, ಕಿರಿಯ ಹೀಗೆ ಎಲ್ಲ ನಟ-ನಟಿಯರನ್ನು ತಮ್ಮ ಮದುವೆಗೆ ಈ ಜೋಡಿ ಆಹ್ವಾನಿಸುತ್ತಿದೆ.

ಕನ್ನಡದ ಹಿರಿಯ ನಟಿ ಜಯಮಾಲಾ ಅವರನ್ನು ತಮ್ಮ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ನಟಿ ಜಯಮಾಲಾ, ಹರ್ಷಿಕಾ ಪೂಣಚ್ಚಗೆ ಚಿನ್ನದ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಹರ್ಷಿಕಾ ಹಾಗೂ ಭುವನ್​ಗೆ ಜಯಮಾಲಾ ಆಶೀರ್ವಾದ ಮಾಡಿದ್ದಾರೆ. ಚಿನ್ನದ ಉಡುಗೊರೆ ಕೊಟ್ಟ ಹಿರಿಯ ನಟಿಯನ್ನು ಖುಷಿಯಿಂದ ಅಪ್ಪಿ ಮುತ್ತಿಟ್ಟಿದ್ದಾರೆ. ಜಯಮಾಲಾ, ಹರ್ಷಿಕಾಗೆ ಜಯಮಾಲಾ ಚಿನ್ನದ ಓಲೆ ಕೊಟ್ಟಿರುವ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ಮದುವೆಗೂ ಮೊದಲೇ ಇನ್ನೊಂದು ಗುಡ್​ ನ್ಯೂಸ್​ ನೀಡಿದ ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ

ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದಾರೆ. ತಮ್ಮ ಪ್ರೀತಿಯನ್ನು ಬಹುತೇಕ ಗುಟ್ಟಾಗಿಯೇ ಇರಿಸಿದ್ದ ಈ ಜೋಡಿ ಇದೀಗ ಮದುವೆ ಆಗುತ್ತಿದ್ದಾರೆ. ಆಗಸ್ಟ್ 24 ಹಾಗೂ 25ರಂದು ಕೊಡಗಿನಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆಯಲಿದೆ. ಇಬ್ಬರೂ ಕೊಡವರಾಗಿದ್ದು, ಮಕೊಡವ ಸಂಪ್ರದಾಯದಂತೆಯೇ ಈ ಇಬ್ಬರ ಮದುವೆ ನಡೆಯಲಿದೆ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ 2012ರಿಂದಲೂ ಪ್ರೀತಿಸುತ್ತಿದ್ದಾರೆ. ಮನೆಯವರ ಒಪ್ಪಿಗೆ ಪಡೆದು ಇದೀಗ ಮದುವೆ ಆಗುತ್ತಿದ್ದಾರೆ. ಇಬ್ಬರೂ ಸಹ ಚಿತ್ರರಂಗದಲ್ಲಿ ಕೆಲ ಕಾಲದಿಂದಲೂ ಸಕ್ರಿಯರಾಗಿದ್ದಾರೆ. ಇದೀಗ ಮದುವೆಗೂ ಮುನ್ನವೇ ಹೊಸ ಸಾಹಸವೊಂದಕ್ಕೆ ಕೈಹಾಕಿದ್ದಾರೆ. ಇಬ್ಬರೂ ಸೇರಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಭುವನಂ ಎಂಟರ್ಟೈನ್​ಮೆಂಟ್ ಎಂದು ನಿರ್ಮಾಣ ಸಂಸ್ಥೆಗೆ ಹೆಸರಿಟ್ಟಿದ್ದು, ಇದರಿಂದ ‘ಭುವನಂ ಶ್ರೇಷ್ಟಂ ಗಚ್ಚಾಮಿ’ ಎಂದು ಸಿನಿಮಾಕ್ಕೆ ಹೆಸರಿಡಲಾಗಿದೆ. ಸಿನಿಮಾಕ್ಕೆ ಹರ್ಷಿಕಾ ಬಂಡವಾಳ ಹೂಡಿದ್ದು ಸಿನಿಮಾವನ್ನು ಭುವನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ