ಮದ್ದೂರಿನಲ್ಲಿ ಬಿಜೆಪಿ ನಾಯಕರಿಗಿಂತ ಹಿಂದೂ ಫೈರ್ ಬ್ರಾಂಡ್​ ಯತ್ನಾಳ್​​ ಗೆ ಭಾರೀ ಜನ ಬೆಂಬಲ

Updated on: Sep 11, 2025 | 8:53 PM

ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಬಳಿಕ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ಬೂದಿಮುಚ್ಚಿದ ಕೆಂಡದಂತಿದೆ. ಕಲ್ಲು ತೂರಾಟ ಖಂಡಿಸಿ ಈಗಾಗಲೇ ಬಿಜೆಪಿ ನಾಯಕರು ಮದ್ದೂರು ಚಲೋ ಮಾಡಿದ್ದಾಯ್ತು. ಇದೀಗ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಬಿಂಬಿತರಾಗಿರುವ ಬಸನಗೌಡ ಪಾಟೀಲ್ ಏಕಾಂಗಿಯಾಗಿ ಮದ್ದೂರಿಗೆ ಆಗಮಿಸಿದ್ದು, ಇವರನ್ನು ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದರು.

ಮಂಡ್ಯ, (ಸೆಪ್ಟೆಂಬರ್ 11):  ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಬಳಿಕ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ಬೂದಿಮುಚ್ಚಿದ ಕೆಂಡದಂತಿದೆ. ಕಲ್ಲು ತೂರಾಟ ಖಂಡಿಸಿ ಈಗಾಗಲೇ ಬಿಜೆಪಿ ನಾಯಕರು ಮದ್ದೂರು ಚಲೋ ಮಾಡಿದ್ದಾಯ್ತು. ಇದೀಗ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಬಿಂಬಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಏಕಾಂಗಿಯಾಗಿ ಮದ್ದೂರಿಗೆ ಆಗಮಿಸಿದ್ದು, ಇವರನ್ನು ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದರು. ಯತ್ನಾಳ್ ಬರುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಹಿಂದೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಆಗಮಿಸಿ ಯತ್ನಾಳ್​ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಿಜೆಪಿ ನಾಯಕರ ಮದ್ದೂರು ಚಲೋ ವೇಳೆ ಸೇರದಷ್ಟು ಜನ ಯತ್ನಾಳ್​ ಸ್ವಾಗತದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಹಾಗಾದ್ರೆ, ಮದ್ದೂರಿನಲ್ಲಿ ಯತ್ನಾಳ್ ಹವಾ ಹೇಗಿದೆ ನೋಡಿ.

Published on: Sep 11, 2025 06:37 PM