ಮದ್ದೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹವಾ ಕಂಡು ಪೊಲೀಸರೇ ದಂಗು
ಕಲ್ಲು ತೂರಾಟದ ಬಳಿಕ ಬೂದಿಮುಚ್ಚಿದ ಕೆಂಡದಂತಿರುವ ಮದ್ದೂರಿಗೆ ಹಿಂದೂ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಭೇಟಿ ನೀಡಿದ್ದು, ಸಹಸ್ರಾರು ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.ಸ್ವಯಂ ಪ್ರೇರಿತರಾಗಿಯೇ ಮದ್ದೂರು ಹಾಗೂ ಅಕ್ಕಪಕ್ಕದ ಗ್ರಾಮದ ಹಿಂದೂ ಕಾರ್ಯಕರ್ತರು ಬಂದು ಯತ್ನಾಳ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಯತ್ನಾಳ್ ರಾಮಂದಿರ ಬಳಿ ಬರುತ್ತಿದ್ದಂತೆಯೇ ಅವರನ್ನು ನೋಡಲು ನೂಕುನೂಗ್ಗಲು ಉಂಟಾಗಿದ್ದು, ತಮಗೆ ವ್ಯಕ್ತವಾಗಿರುವ ಜನ ಬೆಂಬಲ ನೋಡಿ ಯತ್ನಾಳ್ ಫುಲ್ ಖುಷ್ ಆಗಿದ್ದಾರೆ.
ಮಂಡ್ಯ, (ಸೆಪ್ಟೆಂಬರ್ 11): ಕಲ್ಲು ತೂರಾಟದ ಘಟನೆ ಬಳಿಕ ಬೂದಿಮುಚ್ಚಿದ ಕೆಂಡದಂತಿರುವ ಮದ್ದೂರಿಗೆ ಹಿಂದೂ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಭೇಟಿ ನೀಡಿದ್ದು, ಸಹಸ್ರಾರು ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಮದ್ದೂರು ಹಾಗೂ ಅಕ್ಕಪಕ್ಕದ ಗ್ರಾಮದ ಹಿಂದೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿಯೇ ಬಂದು ಯತ್ನಾಳ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಯತ್ನಾಳ್ ರಾಮಂದಿರ ಬಳಿ ಬರುತ್ತಿದ್ದಂತೆಯೇ ಅವರನ್ನು ನೋಡಲು ನೂಕುನೂಗ್ಗಲು ಉಂಟಾಗಿದ್ದು, ತಮಗೆ ವ್ಯಕ್ತವಾಗಿರುವ ಜನ ಬೆಂಬಲ ನೋಡಿ ಯತ್ನಾಳ್ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ಯತ್ನಾಳ್ ಎರಡೂ ಕೈ ಮೇಲೆತ್ತಿ ಸೇರಿರುವ ಹಿಂದೂ ಕಾರ್ಯಕರ್ತರಿಗೆ ನಮಸ್ಕರಿಸಿದರು. ಮತ್ತೊಂದೆಡೆ ಯತ್ನಾಳ್ ಗೆ ಸಿಕ್ಕ ಭಾರೀ ಜನ ಬೆಂಬಲ ಕಂಡು ಪೊಲೀಸರೇ ದಂಗಾಗಿದ್ದಾರೆ.
Published on: Sep 11, 2025 06:59 PM
