Loading video

ಶಾಸಕ ಜನಾರ್ದನ ರೆಡ್ಡಿ ಚಂಚಲಗೂಡ ಜೈಲಿಗೆ ಶಿಫ್ಟ್‌: ವಿಡಿಯೋ ನೋಡಿ

Updated on: May 06, 2025 | 10:51 PM

ಓಬಳಾಪುರಂ ಮೈನಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ಕೋರ್ಟ್ ಮಂಗಳವಾರ (ಮೇ 6) ದೋಷಿ ಎಂದು ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರನ್ನು ಇಂದು (ಮೇ 06) ನೇರವಾಗಿ ಸಿಬಿಐ ಕೋರ್ಟ್‌ನಿಂದ ಹೈದರಾಬಾದ್‌ ಸಮೀಪದ ಚಂಚಲಗುಡ ಜೈಲಿಗೆ ರವಾನಿಸಲಾಗಿದೆ.

ಹೈದರಾಬಾದ್‌, (ಮೇ 06): ಓಬಳಾಪುರಂ ಮೈನಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ಕೋರ್ಟ್ ಮಂಗಳವಾರ (ಮೇ 6) ದೋಷಿ ಎಂದು ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರನ್ನು ಇಂದು (ಮೇ 06) ನೇರವಾಗಿ ಸಿಬಿಐ ಕೋರ್ಟ್‌ನಿಂದ ಹೈದರಾಬಾದ್‌ ಸಮೀಪದ ಚಂಚಲಗುಡ ಜೈಲಿಗೆ ರವಾನಿಸಲಾಗಿದೆ. ಆ ಮೂಲಕ ಅವರು ಮತ್ತೆ ಜೈಲಿಗೆ ಸೇರಿದ್ದಾರೆ. ತೀರ್ಪಿನ ವಿರುದ್ದ ಅವರ ಪರ ವಕೀಲರು ಬುಧವಾರ (ಏ. 7) ಹೈಕೋರ್ಟ್‌ಗೆ ಮೇಲ್ಮಮನವಿ ಸಲ್ಲಿಸುವ ಸಾಧ್ಯತೆ ಇದೆ. ಅದಾಗ್ಯೂ ಹೈಕೋರ್ಟ್ ಮಧ್ಯಂತರ ಆದೇಶ ಬರುವವರೆಗೂ ಅವರು ಜೈಲಿನಲ್ಲಿರಬೇಕಾಗುತ್ತದೆ. ಒಂದು ವೇಳೆ ಹೈಕೋರ್ಟ್‌ನಿಂದ ರೆಡ್ಡಿ ಪರವಾಗಿ ತೀರ್ಪು ಬಂದರೆ ಅವರ ಶಾಸಕ ಸ್ಥಾನ ಉಳಿಯಲಿದೆ. ಒಂದು ವೇಳೆ ರೆಡ್ಡಿ ವಿರುದ್ಧವಾಗಿ ತೀರ್ಪು ಬಂದರೆ ಶಾಸಕ ಸ್ಥಾನ ರದ್ದಾಗಲಿದೆ. ಈ ಬಗ್ಗೆ ಇದೀಗ ಕುತೂಹಲ ಮೂಡಿದೆ. ಕಳೆದ ಬಾರಿ ಜನಾರ್ದನ ರೆಡ್ಡಿ ಮೂರೂವರೆ ವರ್ಷ ಇದೇ ಚಂಚಲಗುಡ ಜೈಲಿದ್ದರು.