AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಗೆರೆ ದಾಟಿ ಪಂದ್ಯ ಸೋತ ಮುಂಬೈ ಇಂಡಿಯನ್ಸ್

VIDEO: ಗೆರೆ ದಾಟಿ ಪಂದ್ಯ ಸೋತ ಮುಂಬೈ ಇಂಡಿಯನ್ಸ್

ಝಾಹಿರ್ ಯೂಸುಫ್
|

Updated on: May 07, 2025 | 7:24 AM

IPL 2025 MI vs GT: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 56ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 155 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೊನೆಯ ಎಸೆತದಲ್ಲಿ 1 ರನ್​ಗಳಿಸುವ ಮೂಲಕ ಪಂದ್ಯ ಗೆದ್ದುಕೊಂಡಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 56ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ಗುಜರಾತ್ ಟೈಟಾನ್ಸ್ (GT) ತಂಡ ರೋಚಕ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡದ ಇನಿಂಗ್ಸ್​ಗೆ ಮಳೆ ಅಡಚಣೆಯನ್ನು ಉಂಟು ಮಾಡಿತು. ಅದರಲ್ಲೂ 18ನೇ ಓವರ್ ಪಂದ್ಯ ನಿಂತ ಬಳಿಕ ಗುಜರಾತ್ ಪಡೆಗೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ, ಒಂದು ಓವರ್​ನಲ್ಲಿ 15 ರನ್​ಗಳ ಗುರಿ ನೀಡಲಾಯಿತು.

ದೀಪಕ್ ಚಹರ್ ಎಸೆದ ಈ ಓವರ್​ನ ಮೊದಲ ಎಸೆತದಲ್ಲೇ ರಾಹುಲ್ ತೆವಾಠಿಯಾ ಫೋರ್ ಬಾರಿಸಿದರು. ಎರಡನೇ ಎಸೆತದಲ್ಲಿ ಒಂದು ರನ್​. ಮೂರನೇ ಎಸೆತದಲ್ಲಿ ಜೆರಾಲ್ಡ್ ಕೊಟ್ಝಿಯ ಭರ್ಜರಿ ಸಿಕ್ಸ್ ಸಿಡಿಸಿದರು. ನಾಲ್ಕನೇ ಎಸೆತದಲ್ಲಿ ಒಂದು ರನ್. ಆದರೆ ಈ ಎಸೆತದಲ್ಲಿ ದೀಪಕ್ ಚಹರ್ ಕ್ರೀಸ್​ ಲೈನ್ ದಾಟುವ ಮೂಲಕ ನೋ ಬಾಲ್ ಮಾಡಿದ್ದರು. ಪರಿಣಾಮ ಗುಜರಾತ್ ಟೈಟಾನ್ಸ್ ತಂಡಕ್ಕೆ ಹೆಚ್ಚುವರಿ ಒಂದು ರನ್ ಲಭಿಸಿತು.

ಫ್ರೀಹಿಟ್ ಎಸೆತದಲ್ಲಿ ರಾಹುಲ್ ತೆವಾಠಿಯಾ ಒಂದು ರನ್​ ಕಲೆಹಾಕಲಷ್ಟೇ ಶಕ್ತರಾದರು. ಐದನೇ ಎಸೆತದಲ್ಲಿ ಜೆರಾಲ್ಡ್ ಕೊಟ್ಝಿಯ ಕ್ಯಾಚ್ ನೀಡಿದರು. ಪರಿಣಾಮ ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿತ್ತು. ಈ ಹಂತದಲ್ಲಿ ಅರ್ಷದ್ ಖಾನ್ ಒಂದು ರನ್ ಕಲೆಹಾಕುವ ಮೂಲಕ ಗುಜರಾತ್ ಟೈಟಾನ್ಸ್ ತಂಡಕ್ಕೆ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು.

ಒಂದು ವೇಳೆ ನಿರ್ಣಾಯಕ ಓವರ್​ನಲ್ಲಿ ದೀಪಕ್ ಚಹರ್ ನೋ ಬಾಲ್ ಎಸೆಯದಿದ್ದರೆ, ಪಂದ್ಯವು ಟೈ ಆಗುವ ಸಾಧ್ಯತೆ ಹೆಚ್ಚಿತ್ತು. ಆದರೆ ಅಂತಿಮ ಓವರ್​ನಲ್ಲಿ ಮುಂಬೈ ವೇಗಿ ಗೆರೆ ದಾಟ್ಟಿದ್ದರ ಪರಿಣಾಮ ಮುಂಬೈ ಇಂಡಿಯನ್ಸ್ ತಂಡವು ಸೋಲಬೇಕಾಯಿತು.